ಸಿಂಗಲ್ ಯ್ಯೂಸ್ ಪ್ಲಾಸ್ಟಿಕ್ ಬಳಸಿದ್ದರೆ ದಂಡ ಬಿಳುವುದು ಪಕ್ಕ

ಗುರುವಾರ, 14 ಜುಲೈ 2022 (21:04 IST)
ಜುಲೈ 1 ಸಿಂಗಲ್ ಯ್ಯೂಸ್ ಪ್ಲಾಸ್ಟಿಕ್  ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ತರಕಾರಿ-ಹಣ್ಣು, ಮಾಂಸ ತರುತ್ತಿದ್ದ ಪ್ಲಾಸ್ಟಿಕ್ ಕವರ್ ಗಳು ಇನ್ಮುಂದೆ ಕಣ್ಣಿಗೆ ಬಿದ್ದರೆ, ಬಿಬಿಎಂಪಿ ದಂಡ ಹಾಕಲಿದೆ. ಸಾಮಾನ್ಯ ಜನ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡು ಹೋಗುತ್ತಿದ್ದರೂ ತಡೆದು ನಿಲ್ಲಿಸಿ ಪಾಲಿಕೆಯವರು ಪ್ರಶ್ನಿಸುತ್ತಿದ್ದಾರೆ. ಇನ್ನು ಅಂಗಡಿಗಳಿಗೆ ಭೇಟಿ ಕೊಟ್ಟು ಪ್ಲಾಸ್ಟಿಕ್ ಕಲರ್ ಬಂಡಲ್ ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.  ಜುಲೈ 1 ರಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಎಂಟು ವಲಯಗಳಲ್ಲಿ 1,926.8 ಕೆಜಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ 1,319 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ 8,36,300 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ನಾಗರಿಕ ಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶದಿಂದ ತಿಳಿದು ಬಂದಿದೆ. ಬಿಬಿಎಂಪಿ ಮಾರ್ಷಲ್ಗಳು ಮಹದೇವಪುರ ವಲಯದಿಂದ 242 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ, ಇದು ಎಲ್ಲಾ ವಲಯಗಳಲ್ಲಿ ಅತಿ ಹೆಚ್ಚು ಅಂದರೆ ದಾಸರಹಳ್ಳಿ ನಂತರ 233 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ