ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆಸ್ತಿ ವಿವಾದ
ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆಸ್ತಿ ವಿವಾದ ಒಂದು ಬಳಕಿದೆ ಬಂದಿದ್ದು, ಯಾದಗಿರಿ ಜಿಲ್ಲೆಯ ಬಡಾಸಾಗರ್ ವಕ್ಫ್ ಆಸ್ತಿಯನ್ನ ಸೈಯದ್ ಹಬಿಬುದ್ದೀನ್ ಎಂಬುವವರು ಕಬಳಿಕೆ ಮಾಡಿದ್ದಾರೆಂದು ಸ್ಥಳಿಯರು ಆರೋಪಿಸಿತ್ತಿದ್ದಾರೆ,ಅಧ್ಯಕ್ಷ ಸ್ಥಾನವನ್ನ ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂ ವಕ್ಫ್ ಆಸ್ತಿಯಾಗಿದ್ದ ಶಹಪೂರ್ ತಾಲೂಕಿನ ಬಡಸಗರದ ಸರ್ವೆ ನಂಬರ್ 191ಮತ್ತು 192ರ ಸರಮಸ್ತ ದರ್ಗಾದ ಆಸ್ತಿಯಾಗಿದ್ದ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಕಟ್ಟಿರುವ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಹಬಿಬುದ್ದೀನ್ ಮೇಲೆ ಈ ಬಗ್ಗೆ FIR ಕೂಡಾ ಆಗಿದೆ, ಆದರು ಪೋಲಿಸ್ ಇಲಾಖೆ ಯಾಗಲಿ ವಕ್ಫ್ ಬೋರ್ಡ್ ಆಗಲಿ ಅವರ ಮೇಲೆ ಕ್ರಮಕೈಗೊಂಡಿಲ್ಲ.2022 ರಲ್ಲಿ ದೂರು ಸಲ್ಲಿಕೆ ಆಗಿದ್ರೂ ವಕ್ಫ್ ಬೋರ್ಡ್ ಮಾತ್ರ ಸೈಯದ್ ಹಬಿಬುದ್ದಿನ್ ಮೇಲೆ ಕ್ರಮ ಕೈಗೊಂಡಿಲ್ಲ ಅನೇಕ ಬಾರಿ ಈ ಬಗ್ಗೆ ದೂರು ಕೊಟ್ಟಿದ್ರು ಸಹ ಯಾವುದೇ ಪ್ರಯೋಜನ ವಾಗಿಲ್ಲ.ಎಂದು ವಕ್ಫ್ ಬೋರ್ಡ್ ಕಚೇರಿ ಬಳಿ ಇಂದು ಅಲ್ಲಿನ ಸ್ಥಳಿಯರು ಆರೋಪಿಸಿದ್ರು.