ರೈತರಿಂದ ರೈತರಿಗಾಗಿ ಜನತಾ ರೈತ ಸಂಘ ಅಸ್ತಿತ್ವಕ್ಕೆ

ಗುರುವಾರ, 16 ಮಾರ್ಚ್ 2023 (15:50 IST)
ರೈತರ ಸಮಗ್ರ ಅಭಿವೃದ್ದಿಗಾಗಿ ನೂತನ ಜನತಾ ರೈತ ಸಂಘಟನೆಯನ್ನು ಹುಟ್ಟುಹಾಕಿದ್ದೇವೆ ಎಂದು ಜನತಾ ರೈತ ಸಂಘದ ರಾಜ್ಯಾಧ್ಯಕ್ಷರಾದ ಈರೇಗೌಡ ತಿಳಿಸಿದರು. ರಾಮಮೂರ್ತಿನಗರದ ಎನ್ಆರ್ ಐ ಬಡಾವಣೆಯಲ್ಲಿ ಆಯೋಜಿಸಿದ್ದ ಜನತಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಈರೇಗೌಡರು, ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಪ್ರತಿ ರೈತನಿಗೂ ಮುಟ್ಟಿಸಬೇಕು. ರೈತರ ಸಮಗ್ರ ಅಭಿವೃದ್ದಿಯೇ ನಮ್ಮ ಅಜೆಂಡಾ. ಯಾವುದೇ ಸರ್ಕಾರಗಳಿರಲಿ ರೈತರಿಗೆ ಅನ್ಯಾಯವಾದರೆ ನಾವೆಲ್ಲ ಒಟ್ಟುಗೂಡಿ ಹೋರಾಡಬೇಕು. 
 
ಈ ನಿಟ್ಟಿನಲ್ಲಿ ಜನತಾ ರೈತ ಸಂಘ ಸ್ಥಾಪನೆ ಮಾಡಿದ್ದೇವೆ.  ಮಾರ್ಚ್ 19ರ ಭಾನುವಾರ ಖಾಸಗಿ ಹಾಲ್ ನಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದೇವೆ ಎಂದ್ರು. ಇದೇವೇಳೆ ಜನತಾ ರೈತ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ಸುಬ್ಬು ಮಾತನಾಡಿ, ಜನತಾ ರೈತ ಸಂಘ ರೈತರಿಂದ, ರೈತರಿಗಾಗಿ ಹುಟ್ಟಿಕೊಂಡಿರುವ ಸಂಘಟನೆ. ರಾಜ್ಯಾಧ್ಯಂತ ಹಲವು ಜಿಲ್ಲೆಗಳಲ್ಲಿ ಸಂಘದ ಕಾರ್ಯಚಟುವಟಿಕೆ ನಡೆಯುತ್ತಿದೆ. ಈ ಸಂಘಟನೆ ಕೇವಲ ಒಂದು ವಿಧಾನಸಭೆ ಕ್ಷೇತ್ರಕ್ಕೆ ಸೀಮಿತವಲ್ಲ. ನಮ್ಮ ಸಂಘಟನೆಯ ಮಾರ್ಗದರ್ಶಕರಾಗಿ ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ವಿಜ್ಞಾನಿಗಳು, ಕೃಷಿ ತಜ್ಞರು ಇದ್ದಾರೆ ಎಂದರು. ಗೌರವಾಧ್ಯಕ್ಷರಾದ ಕಲ್ಕೆರೆ ಮಾರುತಿ ರವರು ಮಾತನಾಡಿ, ರೈತರ ಸಮಗ್ರ ಅಭಿವೃದ್ದಿಯೇ ನಮ್ಮ ಅಜೆಂಡಾ ಎಂದರು.
 
ಕಾರ್ಯಾಧ್ಯಕ್ಷರಾದ ರಘು ಕೆಎನ್, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಮೂರ್ತಿ, ಯುವ ಘಟಕದ ಅಧ್ಯಕ್ಷರಾದ ಸತೀಶ್ ಗೌಡ, ಕಾರ್ಮಿಕ ಘಟಕದ ಅಧ್ಯಕ್ಷರಾದ ಮಹೇಶ್ ಸಿಂಹ, ಪದಾಧಿಕಾರಿಗಳಾದ ಶ್ರೀಮತಿ ರಾಧಾ ಚಂದ್ರಶೇಖರ್, ಉಷಾ ವಿಜಯ್ ಕುಮಾರ್, ಕೃಪಾಕರ ರೆಡ್ಡಿ, ಮೋಹನ್, ಶಿವಶಂಕರಗೌಡ, ಪೂರ್ಣ ಚಂದ್ರಯಾದವ್, ಪಾಲ್ ಜಯಪ್ರಕಾಶ್, ಕೋಲಾರ ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ತುಮಕೂರು ಜಿಲ್ಲಾಧ್ಯಕ್ಷರಾದ ವೀರೇಶ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ