ಯುಗಾದಿಗೆ ಶಾಕ್ ಕೊಟ್ಟ ಸಾರಿಗೆ ನೌಕರರು

ಗುರುವಾರ, 16 ಮಾರ್ಚ್ 2023 (14:53 IST)
ಸಾರಿಗೆ ನೌಕರರ ಸಮರ ಮುಗಿಯುವಂತೆ ಕಾಣಿಸುತ್ತಿಲ್ಲ..ಅತ್ತ ಸರ್ಕಾರ ವೇತನ ಪರಿಷ್ಕರಣೆ ವಿಚಾರದಲ್ಲಿ ಸತಾಯಿಸುತ್ತಿದ್ದ ನೌಕರರನ್ನು ಪದೇ ಪದೇ ಬೀದಿಗಿಳಿಯುವಂತೆ ಮಾಡಿದೆ. ಇನ್ನು ಎಲೆಕ್ಷನ್ ಸನಿಹದಲ್ಲಿರೋದ್ರಿಂದ ಬೇಡಿಕೆ ಗೆ ಆಗ್ರಹಿಸಿ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ. ಮಾರ್ಚ್-೨೧ ರಿಂದ ಯಾವುದೇ ಕಾರಣಕ್ಕೂ 23 ಸಾವಿರ ಸಾರಿಗೆಯ  BMTC , KSRTC ಸೇರಿದಂತೆ ನಾಲ್ಕು ನಿಗಮದ ಬಸ್ ಗಳು ರಸ್ತೆಗಿಳಿಯಲ್ಲ ಅಂತಾ ಹೇಳಿದ್ದಾರೆ..ಹಾಗಿದ್ರೇ ನೌಕರರ ಪ್ರಮುಖ ಬೇಡಿಕೆ ಏನು ಅಂತಾ ನೋಡೋದಾದ್ರೇ.

- ಪರಿಷ್ಕೃತ ಮೂಲ ವೇತನದಲ್ಲಿ 25% ಹೆಚ್ಚಳಕ್ಕೆ ಆಗ್ರಹ
 
- ಚಾಲಕರು ನಿರ್ವಾಹಕ ರು ತಾಂತ್ರಿಕ ಆಡಳಿತ ಸಿಬ್ಬಂದಿಗಳಿಗೂ ಎಲ್ಲಾ ನೌಕರರಿಗೆ ಹಾಲಿ ಇರುವ ಬಾಟಾ  ಹಾಗೂ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು
 
- 2021 ರ ಮುಷ್ಕರದ ಅವಧಿಯಲ್ಲಿ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೇ ಮರುನೇಮಕ ಮಾಡಬೇಕು.
 
- 2021 ಮುಷ್ಕರಕ್ಕಿಳಿದವರ ವರ್ಗಾವಣೆ ಶಿಕ್ಷೆ ರದ್ದು ಮಾಡಿಸಿ ಮಾತೃ ಇಲಾಖೆಗೆ ವಾಪಾಸು ಕರೆತರಬೇಕು ಜೊತೆಗೆ FIR ರದ್ದು ಪಡಿಸಬೇಕು. 
ಇನ್ನು ನೌಕರರ ಪ್ರತಿಭಟನೆಗೆ ಅಸ್ತ್ರಕ್ಕೆ  ಪ್ರತಿಕ್ರಿಯಿಸಿದ ಸಿಎಂ  ನೌಕರರ ಸಮಸ್ಯೆ ಬಗೆಹರಿಸೋದಾಗಿ ಹೇಳಿದ್ರು. ಆದ್ರೇ ಖುದ್ದು ನಮ್ಮನ್ನು ಕರೆದು ಮಾತಾನಾಡಿ ಸಭೆಯಲ್ಲಿ ಬಗೆಹರಿಸಿದ್ರೇ ಮಾತ್ರ ಮುಷ್ಕರ ವಾಪಾಸು ತೆಗೆದುಕೊಳ್ತೀವಿ. ಮಾತಿನ ಭರವಸೆ ನಾವು ನಂಬಲ್ಲ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇನ್ನು ಈ ನಡುವೆ ಇನ್ನೊಂದು ಸಾರಿಗೆ ನೌಕರರ ಸಂಘಟನೆ ಮಾರ್ಚ್ -೨೪ ಕ್ಕೆ ಪ್ರತಿಭಟನೆ ಕೊಟ್ಟಿರೋದು ಮಗದೊಂದು ಗೊಂದಲ  ಮೂಡಿಸಿದೆ. ಒಟ್ಟಾರೆ ಚುನಾವಣೆ ಹೊಸ್ತಿಲಲ್ಲಿ ಸರ್ಕಾರಕ್ಕೆ ಪ್ರತಿಭಟನೆ ಮುಷ್ಕರದ ಕೆಂಡದಲ್ಲಿ ಬೇಯುವಂತಾಗಿದೆ.. ಸಾರಿಗೆ ನೌಕರರ ರೋಷಾಗ್ನಿ ಯನ್ಮು ಸರ್ಕಾರ ತಣಿಸದೇ ಇದ್ರೇ ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ