ಅಕ್ರಮ : ಯುವತಿ ಮಾತಿಗೆ ಸೊಪ್ಪು ಹಾಕದ ಪೊಲೀಸರು?
ಸದ್ಯ ಪೊಲೀಸರು ಮತ್ತು ಎಫ್ಆರ್ ಆರ್ ಒ ಅಧಿಕಾರಿಗಳು ಯುವತಿ ಭಾರತಕ್ಕೆ ಬಂದಿರೋದೇ ಅಕ್ರಮವಾಗಿ, ಹೀಗಾಗಿ ಯುವತಿಯನ್ನ ಪಾಕಿಸ್ತಾನಕ್ಕೆ ಕಳಿಸಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರದ ಸಂಬಂಧಪಟ್ಟ ಏಜೆನ್ಸಿಗಳ ಜೊತೆ ಎಫ್ಆರ್ಆರ್ಓ ಸಂಪರ್ಕ ಮಾಡಿದ್ದಾರೆ. ಪಾಕ್ ಯುವತಿ ವಾಪಸ್ ಕಳಿಸಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತೆ.
ಹೀಗಾಗಿ ಎರಡು ದೇಶಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಯುವತಿಯನ್ನ ವಾಪಸ್ ಕಳಿಸಬೇಕು. ಸದ್ಯ ಯುವತಿಯನ್ನ ಡಿಪೋರ್ಟ್ ಮಾಡಲು ಬೇಕಾದ ಕಾನೂನು ಪ್ರಕ್ರಿಯೆ ಪರಿಶೀಲನೆಯನ್ನು ಎಫ್ಆರ್ ಆರ್ ಓ ಮತ್ತು ಪೊಲೀಸರು ನಡೆಸಿದ್ದಾರೆ.