ಲಕ್ನೋ : ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾನುವಾರ ಉತ್ತರ ಪ್ರದೇಶದ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿ ಅವರು ಚಹಾವನ್ನು ನಿರಾಕರಿಸಿದ್ದಾರೆ.
ನೀವಿದರಲ್ಲಿ ವಿಷ ಬೆರೆಸಿರಬಹುದು ಎನ್ನುತ್ತಾ ಯಾದವ್ ಸಂದೇಹ ವ್ಯಕ್ತಪಡಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ವೀಡಿಯೋದಲ್ಲಿ ಅಖಿಲೇಶ್ ಯಾದವ್, ಪೊಲೀಸ್ ಸಿಬ್ಬಂದಿ ನೀಡಿದ ಚಹಾವನ್ನು ನಿರಾಕರಿಸಿರುವುದು ಕಂಡುಬಂದಿದೆ. ನಾನು ಇಲ್ಲಿ ಚಹಾ ಕುಡಿಯುವುದಿಲ್ಲ. ನಾವು ಹೊರಗಿನಿಂದ ಚಹಾ ತರಿಸಿಕೊಂಡು ಕುಡಿಯುತ್ತೇವೆ. ಬೇಕೆಂದರೆ ನಾವು ನಿಮ್ಮ ಬಳಿಯಿಂದ ಕಪ್ ತೆಗೆದುಕೊಳ್ಳುತ್ತೇವೆ.
ನೀವು ನನಗೆ ವಿಷ ಕೊಟ್ಟರೆ ಏನು? ನನಗೆ ನಿಮ್ಮ ಬಗ್ಗೆ ನಂಬಿಕೆಯಿಲ್ಲ ಎಂದು ನೇರಾನೇರ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.