ಇಂದು ಮಹತ್ವದ ಕಾವೇರಿ ನೀರಾವರಿ ಸಲಹಾ ಸಭೆ

ಸೋಮವಾರ, 7 ಆಗಸ್ಟ್ 2023 (12:22 IST)
ಮಂಡ್ಯ : ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂ ಭರ್ತಿಯಾಗಿಲ್ಲ. ಇದರ ನಡುವೆ ತಮಿಳುನಾಡಿಗೆ ಡ್ಯಾಂನಿಂದ ನೀರು ಬಿಡಲಾಗುತ್ತಿದೆ. ಇತ್ತ ರೈತರ ಬೆಳೆಗೆ ನೀರು ಬಿಡಬೇಕಾ ಬಿಡಬಾರದಾ ಎಂಬುದರ ಕುರಿತು ಸೋಮವಾರ ಮಹತ್ವದ ಸಭೆ ನಡೆಯಲಿದೆ.
 
ರೈತನ ಬದುಕು ಮಾನ್ಸೂನ್ನೊಂದಿಗಿನ ಜೂಜಾಟ ಎಂಬ ಮಾತು ಇದೆ. ಈ ಮಾತಿನಂತೆ ಮಂಡ್ಯ ಜಿಲ್ಲೆಯ ರೈತರ ಕೃಷಿಯ ಬದುಕು ಸದ್ಯ ಜೂಜಾಟದ ರೀತಿಯೇ ಇದೆ. ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಕಾರಣ ಹಳೆ ಮೈಸೂರು ಭಾಗದ ಜೀವನಾಡಿ ಎಂದೇ ಕರೆಯಲ್ಪಡುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಒಡಲು ಇನ್ನೂ ಭರ್ತಿಯಾಗಿಲ್ಲ.

ಕಳೆದ ವರ್ಷ ಇಷ್ಟೋತ್ತಿಗೆ ಉತ್ತಮ ಮಳೆ ಬಿದ್ದು ಕೆಆರ್ಎಸ್ ಡ್ಯಾಂ ಭರ್ತಿಯಾಗುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡುವುದರ ಜೊತೆಗೆ ತಮಿಳುನಾಡಿನ ನೀರಿನ ವ್ಯಾಜ್ಯವು ತಲೆದೋರಿರಲಿಲ್ಲ. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಕೆಆರ್ಎಸ್ ಡ್ಯಾಂನಲ್ಲಿ ಸದ್ಯ 35 ಟಿಎಂಸಿ ನೀರು ಮಾತ್ರ ಇದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ