60 ವರ್ಷಗಳಲ್ಲಿ ದೇವೇಗೌಡ್ರಿಗೆ ಕಾರ್ತಕರ್ತರೇ ಸಿಗಲಿಲ್ವಾ ಎಂದು ಕಾಲೆಳೆದ ಮುಖಂಡ
ಹೆಚ್.ಡಿ.ದೇವೆಗೌಡರು ಮೂರನೇ ತಲೆಮಾರಿಗೆ ರಾಜಕೀಯ ಪ್ರವೇಶ ಮಾಡಿಸಿದ್ದಾರೆ. ನಿಮ್ಮ ಮೊಮ್ಮಗನೇ ಸಿಗಬೇಕಾಯ್ತಾ...!? ಮೊನ್ನೆ 60 ವರ್ಷದ ರಾಜಕೀಯಕ್ಕೆ ಕಣ್ಣೀರು ಹಾಕಿದ್ದಾರೆ. ಈ 60 ವರ್ಷದಲ್ಲಿ ಯಾರು ಕಾರ್ಯಕರ್ತರು ಸಿಗಲಿಲ್ವಾ ಎಂದು ಬಿಜೆಪಿ ಮುಖಂಡ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದು, ದೇವೇಗೌಡ್ರು ತಮ್ಮ ಅವಧಿಯಲ್ಲಿ ಎಷ್ಟು ದಿನ ಸದನದಲ್ಲಿ ಭಾಗವಹಿಸಿದ್ದೀರಿ. ತಮ್ಮ ಮಗ ಕುಮಾರಸ್ವಾಮಿ ಕೂಡ ಸಂಸದರಾಗಿದ್ದರು, ಅವರೆಷ್ಟು ದಿನ ಸದನದಲ್ಲಿ ಹಾಜರಾಗಿದ್ದರು ಎಂದು ಪ್ರಶ್ನೆ ಮಾಡಿದ್ರು.
ಕಾವೇರಿ, ಕೃಷ್ಣಗೆ ಬಂದು ಮುಖ ತೋರಿಸಿ ಹೋದವರು ತಾವೇನು ಮಾಡಿದ್ದೀರಿ? ಇನ್ನೂ ಈಗ ತಾನೆ ಸಂಸತ್ ಗೆ ಕಾಲಿಟ್ಟಿರುವ ರಾಘವೇಂದ್ರ, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತಮಗೆ ಪ್ರಶ್ನಿಸಲು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ತಮ್ಮ ಮಕ್ಕಳು ಮಾತ್ರ ಮಕ್ಕಳು ಬೇರೆಯವರೆಲ್ಲಾ ಅನಾಥರಾ ಎಂದು ಪ್ರಶ್ನೆ ಮಾಡಿದ್ರು.