ಬೆಂಗಳೂರು:ಮನೆ ಕಟ್ಟುವವರಿಗೆ ಶಾಕ್ ಕಾದಿದ್ದು , ಕಬ್ಬಿಣ, ಇಟ್ಟಿಗೆ ಮತ್ತು ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ ಸೇರಿ ಎಲ್ಲಾ ವಸ್ತುಗಳ ಬೆಲೆಯೂ ಬಹುತೇಕ ದುಪ್ಪಟ್ಟಾಗಿದೆ. ಶೇ 40ರಿಂದ ಶೇ 50ರಷ್ಟು ದರ ಹೆಚ್ಚಳವಾಗಿದೆ. ಸಾಧಾರಣ ದರ್ಜೆಯ 10 ಚದರ ಮನೆ ನಿರ್ಮಾಣಕ್ಕೆ 10 ಲಕ್ಷ ರೂ. ಇದ್ದ ನಿರ್ಮಾಣ ವೆಚ್ಚ ಈಗ 20 ಲಕ್ಷ ರೂ. ದಾಟಿದೆ. ಒಳಾಂಗಣಕ್ಕೆ ಬಳಸುವ ವಸ್ತುಗಳಾದ ಮರ, ಟೈಲ್ಸ್, ಸ್ಯಾನಿಟರಿ ಸಲಕರಣೆ ಇತ್ಯಾದಿಗಳ ಬೆಲೆಗಳು ಸಹ ಹೆಚ್ಚಳವಾಗಿದೆಒಂದು ವರ್ಷದ ಅವಧಿಯಲ್ಲೇ ಕಬ್ಬಿಣದ ಬೆಲೆ ಶೇ 58ರಷ್ಟು ಹೆಚ್ಚಾದರೆ, ಸಿಮೆಂಟ್ ದರ ಶೇ 35 ರಷ್ಟು ಏರಿಕೆಯಾಗಿದೆ. ಪಿವಿಸಿ ಪೈಪ್ ದರ ಶೇ 40ರಷ್ಟು, ಎಲೆಕ್ಟ್ರಿಕಲ್ ಕೇಬಲ್‌ಗಳ ದರ ಶೇ 45, ಸ್ಯಾನಿಟರಿ ಸಲಕರಣೆಗಳ ದರ ಶೇ 15ರಷ್ಟು ಹೆಚ್ಚಳವಾಗಿದೆ.