ವೈದ್ಯರೇ ಸೂಚಿಸಿದರೂ ಆಸ್ಪತ್ರೆಯಿಂದ ಬಿಡುಗಡೆಯಾಗದ ವಿದ್ವತ್!
ವಿದ್ವತ್ ಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಆನಂದ್ ಖಾಸಗಿ ವಾಹಿನಿಗಳಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿದ್ವತ್ ಶೇ. 80 ರಷ್ಟು ಗುಣಮುಖರಾಗಿದ್ದಾರೆ. ಅವರು ಡಿಸ್ಚಾರ್ಜ್ ಆಗಬಹುದು ಎಂದು ಈಗಾಗಲೇ ವರದಿ ಕೊಟ್ಟಿರುವುದಾಗಿ ಹೇಳಿದ್ದಾರೆ.
ಹಾಗಿದ್ದರೂ ವಿದ್ವತ್ ಬಿಡುಗಡೆಯಾಗಿಲ್ಲ ಮತ್ತು ತನಿಖಾಧಿಕಾರಿಗಳಿಗೆ ಇನ್ನೂ ಹೇಳಿಕೆ ನೀಡಿಲ್ಲ. ಇದೆಲ್ಲಾ ಪ್ರಕರಣದ ತೀವ್ರತೆ ಕಡಿಮೆಯಾಗದೇ ಇರಲು ಮಾಡುತ್ತಿರುವ ತಂತ್ರವಾ ಎಂಬ ಅನುಮಾನ ಮೂಡಿಸಿವೆ.