ಸುಮಲತಾ ಶ್ರೀರಂಗಪಟ್ಟಣದಿಂದ ಸ್ಫರ್ಧೆಗೆ ಆಹ್ವಾನ

ಮಂಗಳವಾರ, 7 ಫೆಬ್ರವರಿ 2023 (10:32 IST)
ಮಂಡ್ಯ : ಜಿಲ್ಲೆಯಲ್ಲಿ ಚುನಾವಣೆಯ ಅಖಾಡ ಗರಿಗೆದರಿದೆ. ಆಪ್ತರುಗಳು ತಮ್ಮ ನಾಯಕರನ್ನು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ.
 
ಇದೀಗ ಮಂಡ್ಯ ಜಿಲ್ಲೆಯ ನಾಯಕಿಯನ್ನು ಅವರ ಆಪ್ತರು ಪಕ್ಷಕ್ಕೆ ಆಹ್ವಾನ ಮಾಡುವುದರ ಜೊತೆಗೆ ಆ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೂ ಸಹ ಆಹ್ವಾನಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ಬಾಕಿ ಇದೆ. ಹೀಗಿದ್ದರೂ ಸಹ ರಾಜ್ಯದಲ್ಲಿ 3 ರಾಜಕೀಯ ಪಕ್ಷದವರು ಫುಲ್ ಆ್ಯಕ್ಟೀವ್ ಆಗಿ ಮತದಾರರನ್ನು ಸೆಳೆಯಲು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ.

ಅದರಲ್ಲೂ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಫುಲ್ ಆ್ಯಕ್ಟೀವ್. ಮುಖಂಡರು ತಮ್ಮ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನಿಸ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ