ಸಲಿಂಗಕಾಮಕ್ಕೆಂದು ಆಹ್ವಾನ; ಆಮೇಲೆ ಮಾಡುತ್ತಿದ್ದೇನು ಗೊತ್ತಾ?
ಶುಕ್ರವಾರ, 14 ಡಿಸೆಂಬರ್ 2018 (07:08 IST)
ಬೆಂಗಳೂರು : ಸಲಿಂಗಕಾಮಕ್ಕೆಂದು ಆಹ್ವಾನಿಸಿ ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ದೋಚಿಕೊಂಡು ಕಳುಹಿಸುತ್ತಿದ್ದ ರಾಬರಿ ಗ್ಯಾಂಗ್ ವೊಂದನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್ ಥ್ರೂತ್ ಪಾಯಿಂಟ್ ಎನ್ನುವ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳನ್ನು ಆಹ್ವಾನಿಸಿ ಅಡ್ರೆಸ್ ನೀಡುತ್ತಿದ್ದರು. ಸಲಿಂಗ ಕಾಮಿಗಳು ಆ ಅಡ್ರೆಸ್‍ಗೆ ಹೋದಾಗ ಈ ಗ್ಯಾಂಗ್ ಅಲ್ಲಿಗೆ ಬಂದು ಅವರ ಚಿನ್ನಾಭರಣವನ್ನು ದೋಚುತ್ತಿದ್ದರು. ಅಲ್ಲದೇ ವಿಡಿಯೋ ಮಾಡಿರುವುದಾಗಿ ಬೆದರಿಸಿ ಅವರ ಬಳಿಯಿದ್ದ ಹಣ, ಚಿನ್ನ, ಬಟ್ಟೆಗಳನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು
.
ಇಂತಹ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಪಡೆದ ಮೈಕೋ ಲೇಔಟ್ ಪೊಲೀಸರು ಈ ಗ್ಯಾಂಗ್ ನಲ್ಲಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.