ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ
ಸ್ಟಾಲಿನ್ ಪುತ್ರನ ಹೇಳಿಕೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಉದಯನಿಧಿ ಸ್ಟಾಲಿನ್ ಒಂದು ರಾಜ್ಯದ ಮಂತ್ರಿಯಾಗಿದ್ದಾರೆ. ಸಮಾಜದಲ್ಲಿ ಇಂತಹ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ.ಸನಾತನ ಎಂದರೇ ಸದಾ ಕಾಲವೂ ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ನಮ್ಮ ಸುಖದಿಂದ ಅಕ್ಕಪಕ್ಕದವರಿಗೆ ದುಃಖವಾಗಬಾರದು. ಬದಲಾಗಿ ನಮ್ಮ ಸುಖದಿಂದ ಅಕ್ಕಪಕ್ಕದವರಿಗೂ ಸಂತೋಷ ಲಭಿಸಬೇಕು. ಇದು ಸನಾತನ ಧರ್ಮದ ಮೂಲ ಆಶಯವಾಗಿದೆ. ಅಂತಹ ಧರ್ಮವನ್ನು ನಿರ್ಮೂಲಿಸಬೇಕು ಎನ್ನುವ ಪ್ರವೃತ್ತಿ ಸರಿಯಲ್ಲ ಎಂದಿದ್ದಾರೆ. ಸಮಾಜದೊಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಸಚಿವರೊಬ್ಬರ ಸನಾತನ ಧರ್ಮದ ಹೇಳಿಕೆ ಕೇಳಿ ತೀವ್ರ ಅಘಾತವಾಗಿದೆ. ಸನಾತನ ಧರ್ಮ ಅಂದ್ರೆ ಸದಾಕಾಲ ಇರುವಂತಹದ್ದು. ಇಂತಹ ಹೇಳಿಕೆಯನ್ನ ನಾನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ