ರೈತರನ್ನು ಕಾಪಾಡುವುದು ನಮ್ಮ ಜವಾಬ್ದಾರಿ-ಡಿಕೆಶಿವಕುಮಾರ್

ಶುಕ್ರವಾರ, 18 ಆಗಸ್ಟ್ 2023 (13:36 IST)
ರೈತರನ್ನು ಕಾಪಾಡುವುದು ನಮ್ಮ ಜವಾಬ್ದಾರಿ,ನಾವು ನೀರು ಬಿಟ್ಟಿದ್ದೇವೆ.ಸರ್ಕಾರ ಬ್ಯಾಲೆನ್ಸಿಂಗ್ ಆಕ್ಟ್ ಮಾಡಬೇಕಾಗುತ್ತೆ. ಪುನರ್ ಪರಿಶೀಲನೆ ಮಾಡಬೇಕು ಎಂದು ನಾವು ಬೋರ್ಡ್ ಗೆ ಪತ್ರ ಬರೆದಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ತಮಿಳುನಾಡಿಗೆ ನೀರು ಬೀಡುವುದಕ್ಕೆ  ಸ್ವಪಕ್ಷದವರೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನೀರು ಬೀಡುವ ಬಗ್ಗೆ ಕಾನೂನು, ಸಂವಿಧಾನದಲ್ಲೆ ಇದೆ. ರೈತರನ್ನು ಕಾಪಡುವುದು ನಮ್ಮ ಜವಾಬ್ದಾರಿ.ನಾವು ನೀರು ಬಿಟ್ಟಿದ್ದೇವೆ.ಸರ್ಕಾರ ಬ್ಯಾಲೆನ್ಸಿಂಗ್ ಆಕ್ಟ್ ಮಾಡಬೇಕಾಗುತ್ತೆ. ನಾವು ಬೋರ್ಡ್ ಗೆ ಪತ್ರ ಬರೆದಿದ್ದೇವೆ.ದಿನಕ್ಕೆ ಹತ್ತು ಸಾವಿರ ಕ್ಯೂಸಿಕ್ಸ್ ನೀರು ಬಿಟ್ಟ ಬಗ್ಗೆ ಆದೇಶ ಹೊರಡಿಸಿ,ಸದ್ಯ ಕುಡಿಯಲು ನೀರಿಲ್ಲ. ವ್ಯವಸಾಯಕ್ಕಂತೂ ನೀರು ಇಲ್ಲವೆ ಇಲ್ಲ.ಹಿಂದಿನ ಸರ್ಕಾರ ಎಷ್ಟು ನೀರು ಬಿಟ್ಟಿದ್ದಾರೆ.ಅದರ ಪಟ್ಟಿ ನಾನು ಬಿಡುಗಡೆ ಮಾಡ್ಲಾ..? ಎಂದು ಹೇಳಿದರು.ಸರ್ವ ಪಕ್ಷ ಸಭೆ ಕರೆಯುವ ವಿಚಾರವಾಗಿ ಪ್ರತಿಕ್ರಿಯಿಸಿ ನಾವು ಸರ್ವ ಪಕ್ಷ ಸಭೆ ಖಂಡಿತಾ ಕರಿಯುತ್ತೇವೆ.ರಾಜ್ಯದ ಜಲ ಸಮಸ್ಯೆ ವಿಚಾರವಾಗಿ ಸರ್ವ ಪಕ್ಷಗಳ ಸಭೆ ಕರಿಯುತ್ತೇವೆ ಎಂದರು.
 
ರಾಜ್ಯದಲ್ಲಿ ಎನ್ ಇಪಿ ರದ್ದತಿಗೆ ನಿರ್ಮಲಾ ಸೀತಾರಾಮನ್ ವಿರೋಧ ವಿಚಾರವಾಗಿ ಮಾತನಾಡಿ ಎನ್ ಇಪಿ ಜಾರಿ ಮಾಡಿದ್ದು ಬಿಜೆಪಿ ಸರ್ಕಾರದ ನಿರ್ಧಾರ.ನಮ್ಮ ಸರ್ಕಾರ ಬಂದ ಬಳಿಕ ಮರು ಚಿಂತನೆ ಮಾಡ್ತೇವೆ ಅಂತಾ ಹೇಳಿದ್ವಿ ಆದ್ದರಿಂದ ನಾವು ಮರು ಚಿಂತನೆ  ಮಾಡುತ್ತಿದ್ದೇವೆ.ತರಾತುರಿಯಲ್ಲಿ ಯಾಕೆ ಎನ್ ಇಪಿ ರಾಜ್ಯದಲ್ಲಿ ಜಾರಿ‌ಮಾಡಿದ್ರು.ಬೇರೆ ರಾಜ್ಯದಲ್ಲಿ ಯಾಕೆ ಮಾಡಿಲ್ಲ.ಮಧ್ಯಪ್ರದೇಶ, ಹರಿಯಾಣ ಉತ್ತರ ಪ್ರದೇಶದಲ್ಲಿ ಯಾಕೆ ಮಾಡಿಲ್ಲ.ನಮ್ಮ ಜನರಿಗೆ ಎನ್ ಇಪಿ ಬಗ್ಗೆ ತಳಮಳ ಇದೆ.ನಮ್ಮ ಶಿಕ್ಷಣ ಸರಿಯಿಲ್ವಾ ಬೆಂಗಳೂರು ‌ನಾಲೇಜ್ ಕ್ಯಾಪಿಟಲ್‌. ಮೆಡಿಕಲ್ ಹಬ್, ಸಿಲಿಕಾನ್ ವ್ಯಾಲಿ ಅಂತ ಪ್ರಪಂಚದಲ್ಲಿ ಮಾತನಾಡುತ್ತಾರೆ.ನಮ್ಮ ಎಜುಕೇಶನ್ ಬಗ್ಗೆ ಎಲ್ಲರೂ ಒಳ್ಳೆಯ ಮಾತು ‌ಆಡ್ತಾರೆ. ಎನ್ ಇಪಿ ಓಳ್ಳೆಯದಿದ್ರೆ ಮುಂದೆ ಯೋಚನೆ ಮಾಡ್ತೇವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ