ಜನರನ್ನ, ಕಾರ್ಯಕರ್ತರನ್ನ ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ ಎಂದು ಹೇಳಿದ್ದೇವೆ - ಡಿಕೆಶಿವಕುಮಾರ್

ಬುಧವಾರ, 16 ಆಗಸ್ಟ್ 2023 (21:10 IST)
ಜನರನ್ನ, ಕಾರ್ಯಕರ್ತರನ್ನ ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ.ಅದನ್ನ ಲೋಕಲ್ ಲೀಡರ್ಸ್‌ಗೆ ಹೇಳಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ಆಪರೇಷನ್ ಹಸ್ತಕ್ಕೆ ಒಳಗಾದವರಿಗೆ ಮತ್ತೊಮ್ಮೆ ಅವಕಾಶ ಕೊಡ್ತಿರಾ ಎಂಬ ಹೇಳಿಕೆ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮೊದಲು ಪಾರ್ಲಿಮೆಂಟ್ ಎಲೆಕ್ಷನ್. ನಮ್ಮ ಕಾರ್ಯಕರ್ತರಿಗೆ ಈಗಾಗಲೇ ಹೇಳಿದ್ದೇವೆ.ಕೆಲವು ಲೋಕಲ್ ಅಂಡರ್ ಸ್ಟ್ಯಾಂಡಿಂಗ್ ಕೆಲವೊಮ್ಮೆ ದ್ವೇಷ ಮಾಡಬೇಡಿ. ಜನರನ್ನ, ಕಾರ್ಯಕರ್ತರನ್ನ ಓಟ್ ಶೇರ್ ಜಾಸ್ತಿ ಮಾಡಿಕೊಳ್ಳಿ ಎಂದು ಲೋಕಲ್ ಲೀಡರ್ಸ್‌ಗೆ ಹೇಳಿದ್ದೇವೆ. ಕೆಲವೊಮ್ಮೆ ಪಕ್ಷದ ಎಗ್ಸಿಸ್ಟಿಂಗ್ ಇರೋದಿಲ್ಲ.ಅಂತಹ ಸಂದರ್ಭದಲ್ಲಿ ನಮ್ಮ‌ ಪಕ್ಷದ ಶಕ್ತಿ ಮಾಡಿಕೊಳ್ಳಬೇಕು.ದೊಡ್ಡ ಲೀಡರ್ ಅಲ್ಲ, ಅನೇಕರು ಪಕ್ಷಕ್ಕೆ ಸೇರಲು ಬರ್ತಿದ್ದಾರೆ.ಅದನ್ನ ನಾವು ಮೊದಲು ಮಾಡಬೇಕಿದೆ ಎಂದು ಹೇಳಿದರು. 
 
ಇನ್ನೂ ದಾಖಲೆ ಬಿಡುಗಡೆಗೆ ಶುಭಗಳಿಗೆ ಶುಭ ಮುಹೂರ್ತ ಯಾವಾಗ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ ಯಾರು ಹೇಗೆ ಎಗ್ಸಾಸ್ಟ್ ಆಗಬೇಕು ಆಗಲಿ. ಇನ್ನೂ ಯಾರ್ಯಾರು ಮಾತಾಡಬೇಕೋ ಮಾತಾಡಲಿ. ಅವರದ್ದೆಲ್ಲಾ ಮುಗೀಲಿ, ಇನ್ನೂ ಟೈಮಿದೆ.ಶುಭ ಮುಹೂರ್ತ ಏನಿದೆ, ನಾವೇನು ಮಾಡ್ತಿದ್ದೀವಿ, ನಮಗೇನು ಗೊತ್ತಾಗಿದೆ. ಬಹಳ ಚರ್ಚೆ ಮಾಡ್ತಿದ್ರಲ್ಲ ಅದಕ್ಕೆಲ್ಲಾ ಉತ್ತರ ಕೊಡಬೇಕಲ್ವಾ,ಕೊಡೋಣ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ