ಯಾರ ಮನೆ ಮೇಲೆ ಐಟಿ ದಾಳಿ ನಡೆದ್ರೂ ಸಿಎಂ ಆಪ್ತರೆಂದು ಏಕೆ ಬಿಂಬಿಸುತ್ತೀರಾ: ಸಿದ್ದರಾಮಯ್ಯ

ಶುಕ್ರವಾರ, 16 ಡಿಸೆಂಬರ್ 2016 (11:58 IST)
ರಾಜ್ಯದಲ್ಲಿ ಯಾರ ಮನೆ ಮೇಲೆ ಐಟಿ ದಾಳಿ ನಡೆಯುತ್ತದೆಯೋ ಅವರೆಲ್ಲ ಸಿದ್ದರಾಮಯ್ಯ ಅವರ ಆಪ್ತರೆಂದು ಏಕೆ ಬಿಂಬಿಸುತ್ತೀರಾ? ಬಿಜಿಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರೆಂದು ಏಕೆ ಹೇಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
 
ರಾಜಭವನದ ಬಳಿ ಇರುವ ಸೈನಿಕರ ಸ್ಮಾರಕ ಸ್ಥಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ 500, 1000 ಮುಖಬೆಲೆಯ ನೋಟು ನಿಷೇಧದ ನಂತರ ದೇಶದೆಲ್ಲೆಡೆ ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿಕೊಡುವ ದಂಧೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ. ರಾಜ್ಯಲ್ಲಿ ಯಾರ ಮನೆ ಮೇಲೆ ದಾಳಿ ನಡೆದರು ಸಿದ್ದರಾಮಯ್ಯ ಅವರ ಆಪ್ತರೆಂದು ಹೇಳುತ್ತೀರ. ರಾಜ್ಯದ ಆರೂವರೆ ಕೋಟಿ ನಜರು ನನಗೆ ಆಪ್ತರೆಂದು ಹೇಳಿದರು. 
 
ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನೇ ಟಾರ್ಗೆಟ್ ಮಾಡಿಕೊಂಡು ಐಟಿ ದಾಳಿ ಮಾಡಿಸುತ್ತಿದ್ದಾರೆಂದು ನೀವೇಕೆ ಅಂದುಕೊಳ್ಳುತ್ತೀರಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ದೇಶದೆಲ್ಲೆಡೆ ಐಟಿ ಅಧಿಕಾರಿಗಳು ದಾಳಿ ನಡೆಯುತ್ತಿದ್ದಾರೆ. ಅದರಂತೆ, ರಾಜ್ಯದಲ್ಲಿಯೂ ಸಹ ದಾಳಿ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳು ಯಾರಾದರೂ ಸರಿ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ