ಜಾಮಿಯಾ ಮಸೀದಿ ವಿವಾದ ಕೆಣಕಿ ಬಿಜೆಪಿ ರಾಜಕೀಯ : ಹೆಚ್ಡಿಕೆ
ಮಂಡ್ಯದ ಬೇವಿನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಧರ್ಮದ ವಿಚಾರ ಬಳಕೆ ಮಾಡಿಕೊಂಡು ರಾಜಕೀಯ ಮಾಡುವುದು ಮಾತ್ರ ಗೊತ್ತು.
ಆ ಕಾರಣಕ್ಕಾಗಿಯೇ ಅವರು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದವನ್ನು ಕೆಣಕುತ್ತಿದ್ದಾರೆ. ಜನರ ಭಾವನಾತ್ಮಕತೆ ಬಳಸಿಕೊಂಡು ರಾಜಕೀಯವಾಗಿ ಅವರು ಯಶಸ್ವಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.