ಕಾವೇರಿ ಹೋರಾಟ ಹಾಗೂ ಇತರ ರಾಜಕೀಯ ವಿದ್ಯಮಾನಗಳ ಕುರಿತು ಜೆಡಿಎಸ್ ಸಭೆ

ಬುಧವಾರ, 27 ಸೆಪ್ಟಂಬರ್ 2023 (13:41 IST)
ಜೆಡಿಎಸ್- ಬಿಜೆಪಿ ಮೈತ್ರಿ, ಕಾವೇರಿ ಹೋರಾಟ ಹಾಗೂ ಇತರ ರಾಜಕೀಯ ವಿದ್ಯಮಾನಗಳ  ಕುರಿತು ಜೆಡಿಎಸ್ ಕಚೇರಿಯಲ್ಲಿ  ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ  ಹೆಚ್.ಡಿ.ದೇವೇಗೌಡರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಈಗ ಆರಂಭವಾಗುತ್ತಿದೆ.
 
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ. ಜೆಡಿಎಸ್ ಪಕ್ಷದ ಶಾಸಕರಾದ ಕೆ. ಆರ್ ಪೇಟೆಯ ಮಂಜುನಾಥ್, ತುರುವೇಕೆರೆ  ಎಂ .ಟಿ. ಕೃಷ್ಣಪ್ಪ  ವಿಧಾನ ಪರಿಷತ್ ಸದಸ್ಯ  ಮಂಜೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಉಪಸ್ಥಿತರಿದ್ದರು.
 
ಹೆಚ್.ಡಿ.ದೇವೇಗೌಡ ಮಾತು.. ಕುಮಾರಸ್ವಾಮಿಯವರು ಭಾರತೀಯ ಜನತಾ ಪಾರ್ಟಿ ನಾಯಕರನ್ನು ಸಂಪರ್ಕ ಮಾಡುವ ಮುನ್ನ ನಾನು ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರ ಜೊತೆ ಚರ್ಚೆ ಮಾಡಿದ್ದೇನೆ. ಕದ್ದು, ಮುಚ್ಚಿ ಯಾವುದು ಮಾತನಾಡಿಲ್ಲ.  ಅವರ ಬಳಿ ಮಾತನಾಡುವಾಗ ಹೇಳಿದ್ದೇನೆ ಕರ್ನಾಟಕದ ಸ್ಥಿತಿ ಏನಿದೆ ಅನ್ನೋದನ್ನ ತಿಳಿಸಿದ್ದೇನೆ. ಅಮಿತ್ ಶಾ ಅವರ ಬಳಿ ಎಲ್ಲಾ ವಿಚಾರಗಳನ್ನು ಮಾತನಾಡಿದ್ದೇನೆ. ನಾವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಕಳೆದ 60 ವರ್ಷಗಳ ನನ್ನ ಹೋರಾಟದಲ್ಲಿ ಯಾವುದೇ ಸಮೂಹಕ್ಕೆ ಈ ಪಕ್ಷದಿಂದ ಅನ್ಯಾಯವಾಗಲು ಬಿಟ್ಟಿಲ್ಲ. ಯಾವುದೇ ಸಮುದಾಯ ಇರಲಿ. ಇವತ್ತು ಯಾಕೆ ಹೀಗಾಯ್ತು ಇದಕ್ಕೆ ಯಾರು ಜವಾಬ್ದಾರರು ಯಾರು?. ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರ ತೆಗೆದಿದ್ದು ಯಾರು?.  17 ಜನ ಶಾಸಕರನ್ನು ಮುಂಬೈಗೆ ಕಳಿಸಿಕೊಟ್ಟಿದ್ದು ಯಾರು?.  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಇದರ ಬಗ್ಗೆ ಚರ್ಚೆ ಮಾಡೋಣ ಇದಕ್ಕೆ ಜವಾಬ್ದಾರಿ ಯಾರು?.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಯಾರು ನಮ್ಮ ಬಳಿ ಬಂದಿದ್ದು,  ಗುಲಾಬ್ ನಬಿ ಆಜಾದ್ ಹಾಗೂ ರಾಜಸ್ಥಾನ ಸಿಎಂ ನಮ್ಮ ಮನೆಗೆ ಬಂದು ನನ್ನನ್ನು ಒತ್ತಾಯ ಮಾಡಿದರು. ಆಗಲೂ ಸಹ, ನಿಮ್ಮ ಸಹವಾಸ ಬೇಡ ಅಂತ ಹೇಳಿದೆ.  ಒತ್ತಾಯ ಮಾಡಿದರು.ಇವತ್ತು ಬಿಜೆಪಿ ಜೊತೆ ಯಾಕೆ ಸಂಬಂಧ ಬೆಳೆಸಿದ್ದೀರಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ