ಹುಡುಗಿಯರೇ ಪೆನ್ ಡ್ರೈವ್ ನಲ್ಲಿ ಖಾಸಗಿ ವಿಡಿಯೋ ಹಾಗೂ ಫೋಟೋಸ್ ಇಟ್ಟುಕೊಳ್ಳುವ ಮುನ್ನ ಜೋಕೆ

ಶನಿವಾರ, 24 ಡಿಸೆಂಬರ್ 2022 (16:49 IST)
ಪೆನ್ ಡ್ರೈವ್ ನಲ್ಲಿದ್ದ ಯುವತಿಯ ಖಾಸಗಿ ಪೋಟೋ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪಿಯನ್ನ ಬೆಂಗಳೂರು ಆಗ್ನೇಯ ವಿಭಾಗದ ಸೈಬರ್  ಪೊಲೀಸರು ಬಂಧಿಸಿದ್ದಾರೆ.
 
ಶೋಯೆಬ್ ಮೊಹಮ್ಮದ್ ಬಂಧಿತ ಆರೋಪಿಯಾಗಿದ್ದು,ಖಾಸಗಿ ಫೋಟೋಸ್ ಹಾಗೂ ವೀಡಿಯೋಸ್ ಇಟ್ಟುಕೊಂಡಿದ್ದ  ಪೆನ್ ಡ್ರೈವ್ ಯುವತಿ ಕಳೆದುಕೊಂಡಿದ್ದಳು.ಆ ಪೆನ್ ಡ್ರೈವ್ ಆರೋಪಿಗೆ ಸಿಕ್ಕಿದೆ.ಹೇಗೋ ಯುವತಿಯ ನಂಬರ್ ಕಲೆಕ್ಟ್ ಮಾಡಿದ್ದ ಆರೋಪಿ.ಪೋಟೋಗಳನ್ನ ವಾಟ್ಸಾಪ್ ಮೂಲಕ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ.70 ಸಾವಿರ ಹಣಕ್ಕೆ ಆರೋಪಿ ಬೇಡಿಕೆ ಇಟ್ಟಿದ್ದ .ಹಣ ಕೊಟ್ಟರಷ್ಟೇ ಪೆನ್ ಡ್ರೈವ್ ಕೊಡೋದಾಗಿ ಬ್ಲಾಕ್ ಮೇಲ್ ಮಾಡಿದ.ಹೀಗಾಗಿ ಆಗ್ನೇಯ ಸೆನ್ ಪೊಲೀಸ್ರಿಗೆ ದೂರು ನೀಡಿದ್ದ ಯುವತಿ.ದೂರು ದಾಖಲಿಸಿ ಟೆಕ್ನಿಕಲ್ ಆಧಾರದ ಮೇಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ