ಹುಟ್ಟುಹಬ್ಬದ ದಿನವೇ ಸೋಲಿನ ಕಹಿ ಉಂಡ ಕೆ.ಅಣ್ಣಾಮಲೈ
ಲೋಕಸಭೆ ಚುನಾವಣೆ ಘೋಷಣೆ ಆದ ಬೆನ್ನಲ್ಲೇ ಗೆಲುವಿನ ಲೆಕ್ಕಾಚಾರ ಹಾಕಿಕೊಂಡು ಕೆಲಸ ಶುರು ಮಾಡಿದ ಅಣ್ಣಾಮಲೈ ಅವರು ನಿರಂತರ ಪ್ರಚಾರ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿಸಿದ್ದರು. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅಣ್ಣಾಮಲೈ ಪರ ಮತಯಾಚನೆ ಮಾಡಿ, ರೋಡ್ ಶೋ ನಡೆಸಿದ್ದರು. ಆದರೆ ಈ ಎಲ್ಲ ಲೆಕ್ಕಚಾರ ಕೆಲಸವಾಗದೆ ಸೋಲು ಅನುಭವಿಸಿದ್ದಾರೆ.