Kamal Hassan: ನಮ್ ಭಾಷೆ ಬಗ್ಗೆ ಮಾತಾಡಕ್ಕೆ ನಿನಗೇನು ಯೋಗ್ಯತೆಯಿದೆ: ಕಮಲ್ ಹಾಸನ್ ಗೆ ಕರವೇ ನಾರಾಯಣಸ್ವಾಮಿ

Krishnaveni K

ಬುಧವಾರ, 28 ಮೇ 2025 (13:35 IST)
ಬೆಂಗಳೂರು: ನಮ್ ಭಾಷೆ ಬಗ್ಗೆ ಮಾತನಾಡಲು ನಿನಗೇನು ಯೋಗ್ಯತೆಯಿದೆ ಎಂದು ಕನ್ನಡದ ಬಗ್ಗೆ  ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಬಗ್ಗೆ ಕರವೇ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಥಗ್ಸ್ ಆಫ್ ಲೈಫ್ ಸಿನಿಮಾ ಈವೆಂಟ್ ನಲ್ಲಿ ಶಿವಣ್ಣನ ಎದುರೇ ತಮಿಳು ನಟ ಕಮಲ್ ಹಾಸನ್ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದಿದ್ದರು. ಅವರ  ಈ ಮಾತು ಈಗ ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು ಕಮಲ್ ಕ್ಷಮೆ ಯಾಚನೆಗೆ ಆಗ್ರಹಿಸಿವೆ.

ನಿನ್ನೆಯಿಂದಲೇ ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇಂದೂ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆ ನಟನ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಕ್ಷಮೆ ಕೇಳಬೇಕು, ಅವರ ಸಿನಿಮಾಗಳನ್ನು ಇಲ್ಲಿ ರಿಲೀಸ್ ಮಾಡಲು ಬಿಡಲ್ಲ ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ.


ಈ ನಡುವೆ ಕಮಲ್ ಬಗ್ಗೆ ವಾಗ್ದಾಳಿ ನಡೆಸಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ ‘ಕಮಲ್ ಹಾಸನ್ ಅವಿವೇಕಿ, ದುರಭಿಮಾನಿ. ಕನ್ನಡದ ಬಗ್ಗೆ ಮಾತನಾಡಲು ನಿನಗೇನು ಯೋಗ್ಯತೆಯಿದೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ