ನೀರಿನ ವಿಚಾರಕ್ಕೆ ಕರ್ನಾಟಕ ಬಂದ್

ಸೋಮವಾರ, 25 ಸೆಪ್ಟಂಬರ್ 2023 (20:41 IST)
ನೀರಿನ ವಿಚಾರದಲ್ಲಿ ಕರ್ನಾಟಕ ಬಂದ್ ಮಾಡಿದ್ದೇನೆ ಎಂದು ಮಾಜಿ ಸಂಸದ ಶಿವರಾಮೇ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಬಂದ್‌ಗೆ ಕರೆ ನೀಡಿದಲ್ಲ, ಕಾವೇರಿ ವಿಚಾರದಲ್ಲಿ ಬರಿ ಬೆಂಗಳೂರು ಬಂದ್ ಮಾಡಿದ್ರೆ ಸಾಲದು. ಇಡೀ ಕರ್ನಾಟಕ ಬಂದ್ ಆಗಬೇಕು. ನಾವು ಕನ್ನಡ ‌ಹೋರಾಟಗಾರರಿಗೆ ಸಾಥ್ ನೀಡಬೇಕಾ ಅಥವಾ ರಾಜಕೀಯ ಪಕ್ಷಕ್ಕೆ ಸಾಥ್ ನೀಡಬೇಕಾ..? ಮುಖ್ಯಮಂತ್ರಿ ಚಂದ್ರು ಅವರಿಗೆ ಬೆಂಬಲ ನೀಡಬೇಕಾ. ನಾವೆಲ್ಲಾ ಒಟ್ಟಾಗಿ ಸೇರಿ ಕರ್ನಾಟಕ ಬಂದ್ ಮಾಡೋಣ ಅಂದರೆ ಅವರು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ