ಫೆ.17 ರಿಂದ ಈ ನಂಬರ್ ಪ್ಲೇಟ್ ಇರದಿದ್ದರೆ ವಾಹನ ಸವಾರರಿಗೆ ಬೀಳಲಿದೆ 1000 ರೂ. ದಂಡ

Krishnaveni K

ಗುರುವಾರ, 1 ಫೆಬ್ರವರಿ 2024 (16:06 IST)
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ವಾಹನ ಸವಾರರಿಗೆ ತಮ್ಮ ವಾಹನಗಳಿಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಡೆಡ್ ಲೈನ್ ನೀಡಿದೆ. ಅಳವಡಿಸದೇ ಇದ್ದಲ್ಲಿ ದಂಡದ ಬರೆ ಹಾಕುವ ಎಚ್ಚರಿಕೆ ನೀಡಿದೆ.

ಸಾರಿಗೆ ಇಲಾಖೆ ಗಡುವು ನೀಡಿದರೂ ಯಾರೂ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಬೇರೆ ದಾರಿಯಿಲ್ಲದೇ ಸಾರಿಗೆ ಇಲಾಖೆ ದಂಡ ಪ್ರಯೋಗಕ್ಕೆ ಮುಂದಾಗಿದೆ. ಫೆಬ್ರವರಿ 17 ರಿಂದ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ವಾಹನ ಸವಾರರಿಗೆ ಒಂದರಿಂದ ಎರಡು ಸಾವಿರ ರೂ.ವರೆಗೆ ದಂಡ ವಿಧಿಸಲು ಮುಂದಾಗಿದೆ.

ಮೊದಲ ಬಾರಿಗೆ ಸಿಕ್ಕಿಬಿದ್ದರೆ ಒಂದು ಸಾವಿರ ರೂ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಎರಡು ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಇದಕ್ಕೆ ಮೊದಲು ಸಾರಿಗೆ ಇಲಾಖೆ 2023 ರ ನವಂಬರ್ 17 ವರವರೆಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಹಾಕಿಸಲು ಗಡುವು ನೀಡಿತ್ತು.

ಆದರೆ ಈ ಗಡುವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದುವರೆಗೆ ಕೇವಲ 10 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಹಾಕಲಾಗಿದೆ.  ಆದರೆ ಇದಕ್ಕೆ ವಾಹನ ಚಾಲಕರಿಂದಲೂ ಆಕ್ಷೇಪ ಕೇಳಿಬಂದಿದೆ. ಕನಿಷ್ಠ ಒಂದು ವರ್ಷವಾದರೂ ಗಡುವು ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ ಇದಕ್ಕೆ ಸಾರಿಗೆ ಇಲಾಖೆ ಕಿವಿಗೊಡುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ