Karnataka Weather: ನಿರೀಕ್ಷೆಯಂತೇ ಬೆಂಗಳೂರಿಗೆ ಬಂದ ಮಳೆ

Krishnaveni K

ಶನಿವಾರ, 22 ಮಾರ್ಚ್ 2025 (16:37 IST)
ಬೆಂಗಳೂರು: ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಸೂಚನೆಯಿತ್ತು. ಇದೀಗ ನಿರೀಕ್ಷೆಯಂತೇ ಬೆಂಗಳೂರಿಗೆ ಮಳೆಯಾಗಿದೆ.

ಇಂದು ಅಪರಾಹ್ನ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನದವರೆಗೂ ತಾಪಮಾನ 33 ಡಿಗ್ರಿಯವರೆಗಿತ್ತು. ವಿಪರೀತ ಬಿಸಲು, ಸೆಖೆಯಿಂದ ಬಳಲುತ್ತಿದ್ದ ಬೆಂಗಳೂರಿಗರಿಗೆ ಈ ಮಳೆ ತಂಪು ನೀಡಿದೆ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ವಿಪರೀತ ಬಿಸಲಿನ ವಾತಾವರಣವಿತ್ತು. ಈ ಬಾರಿ ತಾಪಮಾನ 40 ಡಿಗ್ರಿಯವರೆಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿದ್ದವು. ಇದೀಗ ನಿರೀಕ್ಷೆಯಂತೆ ಭಾರೀ ಮಳೆಯಾಗುತ್ತಿದ್ದು ನಾಳೆಯೂ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ