ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಹಿಂದೆಂದೂ ಇರದ ಹವಾಮಾನ

Krishnaveni K

ಭಾನುವಾರ, 9 ಫೆಬ್ರವರಿ 2025 (08:30 IST)
ಬೆಂಗಳೂರು: ಕರ್ನಾಟಕದಲ್ಲಿ ಹಿಂದೆಂದೂ ಕಾಣದಂತಹ ಹವಾಮಾನ ದಾಖಲಾಗಿದೆ. ಬಿಸಿಲ ನಡುವೆ ಕನಿಷ್ಠ ತಾಪಮಾನ ದಾಖಲಾಗಿದೆ.

ರಾಜ್ಯದಲ್ಲಿ ಇದೀಗ ಹಗಲು ವಿಪರೀತ ಬಿಸಿಲು, ರಾತ್ರಿ ಚಳಿಯ ವಾತಾವರಣವಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಗರಿಷ್ಠ ತಾಪಮಾನ 30 ಡಿಗ್ರಿಯವರೆಗೆ ತಲುಪಿದೆ. ಉಳಿದ ಕಡೆಗಳಲ್ಲೂ ತಾಪಮಾನ ಹಗಲು ಹೊತ್ತು ಹೆಚ್ಚು ಕಡಿಮೆ ಹೀಗೇ ಇದೆ.

ಆದರೆ ರಾತ್ರಿ ಒಣ ಹವೆ ಚಳಿಯ ವಾತಾವರಣ ಕಂಡುಬರುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಕನಿಷ್ಠ ತಾಪಮಾನ ಕಂಡುಬಂದಿದ್ದು ದಾಖಲೆ ಬರೆದಿದೆ. ದಾವಣಗೆರೆಯಲ್ಲಿ 13.5 ಡಿಗ್ರಿ ಸೆಲ್ಶಿಯಸ್ ಕನಿಷ್ಠ ತಾಪಾಮಾನ ಕಂಡುಬಂದಿದ್ದು ದಾಖಲೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ದಾಖಲಾಗಿದೆ. ಉಳಿದಂತೆ ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಉಡುಪಿ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು ಮುಂತಾದೆಡೆ ಒಣ ಹವೆ ಇನ್ನಷ್ಟು ದಿನ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ