ಕಾವೇರಿ ತೀರ್ಥೋದ್ಬವಕ್ಕೆ ದಿನಗಣನೆ, ಇಲ್ಲಿದೆ ಸಂಪೂರ್ಣ ಡೀಟೆಲ್ಸ್‌

Sampriya

ಶನಿವಾರ, 14 ಸೆಪ್ಟಂಬರ್ 2024 (19:59 IST)
Photo Courtesy X
ಮಡಿಕೇರಿ: ಅ.17ರಂದು ಬೆಳಿಗ್ಗೆ 7.40ಕ್ಕೆ ತುಲಾ ಲಗ್ನದಲ್ಲಿ ತಲಕಾವೇರಿಯ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಆಗಲಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ತಿಳಿಸಿದೆ.

ಈ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಶನಿವಾರ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಹಳೆ ಮುಡಿ ಕಟ್ಟಡದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಇದಕ್ಕೂ ಮುನ್ನ ಸೆ. 26ರಂದು ಬೆಳಿಗ್ಗೆ 8.35ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ 'ಪತ್ತಾಯಕ್ಕೆ ಅಕ್ಕಿ ಹಾಕುವ' ಕಾರ್ಯ ನಡೆಯಲಿದೆ. ಅ. 4ರಂದು ಬೆಳಿಗ್ಗೆ 10.21ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ 'ಆಜ್ಞಾ ಮುಹೂರ್ತ' ನಡೆಯಲಿದೆ.

ಅ. 14ರಂದು ಬೆಳಿಗ್ಗೆ 11.35ಕ್ಕೆ ಸಲ್ಲುವ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುತ್ತದೆ. ಅಂದು ಸಂಜೆ 4.15ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸಲಾಗುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ