ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಗವರ್ನರ್ ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಪೇಜ್ ಶೀಘ್ರವೇ ರಿಸ್ಟೋರ್ ಆಗಲಿದೆ ಎಂದಿದ್ದಾರೆ. ಕೇರಳ ರಾಜ್ಯಪಾಲರು ಹಿಜಬ್ ಸೇರಿದಂತೆ ಹಲವು ವಿಚಾರಗಳಲ್ಲಿ ಉದಾರವಾದಿ ನಿಲುವುಗಳನ್ನು ಪ್ರದರ್ಶಿಸಿದ್ದು, ಕೆಲವು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸಾಧ್ಯತೆ ಇದೆ. ಈ ಸಂಬಂಧ ತನಿಖೆ ನಡೆಸಿರುವ ಸೈಬರ್ ಟೀಂ, ರಾಜ್ಯಪಾಲರ ಫೇಸ್ ಬುಕ್ ಪೇಜನ್ನು ಯಾರು ಹ್ಯಾಕ್ ಮಾಡಿದ್ದಾರೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದಾರೆ.