ಕೊಡಗು ಸಂತ್ರಸ್ಥರಿಗೆ ಶಿಕ್ಷಕರ ದಿನಾಚರಣೆಯಂದು ದೇಣಿಗೆ

ಶುಕ್ರವಾರ, 7 ಸೆಪ್ಟಂಬರ್ 2018 (16:21 IST)
ಭಾರೀ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಕೊಡಗು ಸಂತ್ರಸ್ಥರಿಗೆ ಶಿಕ್ಷಕರ ದಿನಾಚರಣೆ ದಿನದಂದು ಶಿಕ್ಷಕರು ಪರಿಹಾರ ನಿಧಿ ನೀಡುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸಿದರು.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪೆಯ ಬಂಗಾರಮಕ್ಕಿ ಶ್ರೀ ವೀರಾಂಜ ನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆಯ ಅಡಿಯಲ್ಲಿನ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಯಿತು.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕೊಡಗು ಸಂತ್ರಸ್ತರಿಗಾಗಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಮಾರುತಿ ಗುರೂಜಿಯವರು ಒಂದು ಲಕ್ಷ ರೂ.ಗಳ ಚೆಕ್‍ನ್ನು ಕಂದಾಯ ನಿರೀಕ್ಷಕರ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಿದರು. ಈ ದೇಣಿಗೆಯಲ್ಲಿ ಆಡಳಿತ ಮಂಡಳಿ, ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡು ಶಿಕ್ಷಕರ ದಿನಾಚರಣೆಯನ್ನು ವಿನೂತನ ಹಾಗೂ ಮಾದರಿಯಾಗಿ ಆಚರಣೆ ಮಾಡಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ