ಪರಿಷ್ಕೃತ ಪಠ್ಯ ಪುಸ್ತಕದ ಪ್ರತಿಯನ್ನು ಹರಿದು ಹಾಕಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ

ಶನಿವಾರ, 18 ಜೂನ್ 2022 (20:37 IST)
ಪರಿಷ್ಕೃತ ಪಠ್ಯ ಪುಸ್ತಕದ ಪ್ರತಿಯನ್ನು ಹರಿದು ಹಾಕಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಮಹಾಕವಿ ಕುವೆಂಪು ಹೋರಾಟ ಸಮಿತಿ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿ ಬೃಹತ್ ಪ್ರತಿಭಟನಾ ಸಮ್ಮೇಳನದಲ್ಲಿ ಪರಿಷ್ಕೃತ ಪಠ್ಯ ಪುಸ್ತಕದ ಪ್ರತಿಯನ್ನು ಹರಿದು .ಈ ವೇಳೆ ಮಾತನಾಡಿದ ಡಿಕೆಶಿ, ಸರ್ಕಾರ ಈ ಪಠ್ಯಪುಸ್ತಕವನ್ನು ಹಿಂದಕ್ಕೆ ಪಡೆಯಬೇಕು. ಪಡೆಯದೇ ಇದ್ದರೆ ಕೇವಲ 12 ತಿಂಗಳಿನಲ್ಲಿ ನಮ್ಮದೇಯಾದ ಸರ್ಕಾರ ತಂದು ಕಿತ್ತೆಸೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ನಾರಾಯಣ ಗುರು, ಶಂಕರಾಚಾರ್ಯರು ಸೇರಿದಂತೆ ಹಲವರಿಗೆ ಅವಮಾನ ಆಗಿದೆ. ಕೆಲವು ಸ್ವಾಮೀಜಿಗಳು ಮೈಮೇಲೆ ಎಣ್ಣೆ ಹಾಕಿಕೊಂಡು ಕೂತಿದ್ದಾರೆ. ಮಹಾಭಾರತ ನೆನಪಾಗುತ್ತದೆ, ದ್ರೌಪದಿ ವಸ್ತ್ರಾಪಹರಣ ಆಗುವಾಗ ನೋಡುತ್ತಿದ್ರು. ಹಾಗೆ ಸ್ವಾಮೀಜಿಗಳು ಮೈಗೆ ಎಣ್ಣೆ ಹಾಕಿಕೊಂಡು ಕೂತಿದ್ದಾರೆ. ಸಂವಿಧಾನ ನಮಗೆ ಬೈಬಲ್, ಮಹಾಭಾರತ, ಕುರಾನ್ ಆಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ