ಕೃಷ್ಣಾ ಪ್ರವಾಹ ಭೀಕರ: ಅಲ್ಲಿರೋ ಹೊಸ ಭೀತಿ ಎಂಥದ್ದು?

ಭಾನುವಾರ, 18 ಆಗಸ್ಟ್ 2019 (21:07 IST)
ಕೃಷ್ಣಾ ಪ್ರವಾಹಕ್ಕೆ ಸಹಸ್ರಾರು ಜನರ ಬದುಕು ಈಗಾಗಲೇ ಬೀದಿಗೆ ಬಂದಿದೆ. ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಕೃಷ್ಣಾ ಪ್ರವಾಹದಿಂದಾಗಿ ಮುಳುಗಡೆಯಾಗಿದ್ದ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಯಾವುದೇ ಕ್ಷಣದಲ್ಲಾದರೂ ಸೇತುವೆ ಕುಸಿಯುವ ಭೀತಿ ಸುತ್ತಲಿನ ಜನರಿಗೆ ಕಾಡಲಾರಂಭಿಸಿದೆ.
ದರೂರು - ಹಲ್ಯಾಳ ಸೇತುವೆ ಸಂಚಾರಕ್ಕೆ ನಿಷೇಧ ಮಾಡಲಾಗಿದೆ.

ದರೂರು- ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಈಗ ಸಂಕಷ್ಟಕ್ಕೆ ಸಿಲುಕಿದೆ.

ದರೂರು - ಹಲ್ಯಾಳ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮಗಳಾಗಿವೆ. ಒಂದು ಕೀಮಿಗಟ್ಟಲೇ ಬಾಯ್ಬಿಟ್ಟಿರುವ ಸೇತುವೆಯ ಬಳಿ ಇರುವ ರಸ್ತೆಯಿಂದಾಗಿ ವಾಹನಗಳ ಸಂಚಾರರು ಹೈರಾಣಾಗಿದ್ದಾರೆ.

ಯಾವುದೇ ಭಾರಿ ವಾಹನ ಸಂಚಾರಕ್ಕೆ ಅನುವು ಮಾಡದ ಅಥಣಿ ಪೊಲೀಸರು, ಮಹರಾಷ್ಟ್ರ ಮತ್ತು ಕರ್ನಾಟಕದ ಸಂಪರ್ಕದ ಕೊಂಡಿಯಾಗಿದ್ದ ಸೇತುವೆ ಮೇಲೆ ನಿಗಾ ಇಟ್ಟಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ