ರಾಜ್ಯದಲ್ಲಿ ಚಿಲ್ಲರೆ ರಾಜಕಾರಣ ನಡೆಯುತ್ತಿದೆ- ಹೆಚ್ ಡಿ.ಕೆ

ಮಂಗಳವಾರ, 22 ಅಕ್ಟೋಬರ್ 2019 (11:58 IST)
ಹಾಸನ : ರಾಜ್ಯದಲ್ಲಿ ಚಿಲ್ಲರೆ ರಾಜಕಾರಣ ನಡೆಯುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.




ಸಿಎಂ ಯಾದಗಿರಿ ಭೇಟಿಯ ವೇಳೆ ಪ್ರತಿಭಟನೆ ಮಾಡಲಾಗಿತ್ತು. ಧರಣಿ ನಿರತ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಲಾಗ್ತಿದೆ. ಅನರ್ಹ ಶಾಸಕರು ಶಾಸಕರೆಂದು ಸಿಎಂಗೆ ಪತ್ರ ಕೊಡುತ್ತಾರೆ. ಆ ಪತ್ರಕ್ಕೆ ಸಿಎಂ 200-300 ಕೋಟಿ ರೂ ಬಿಡುಗಡೆ ಮಾಡ್ತಾರೆ. ಜನರ ತೆರಿಗೆ ಹಣ ಇಷ್ಟಾನುಸಾರ ಖರ್ಚು ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.


ನಮ್ಮ ಮನೆ ಮೇಲೆ ಐಟಿ ದಾಳಿ ನಡೆಯಲಿ. ಐಟಿ ಅಧಿಕಾರಿಗಳು ಬರಲಿ ಎಂದು ನಾನು ಕಾಯುತ್ತಿದ್ದೇನೆ, ಮನೆಯಲ್ಲಿ ಯಡಿಯೂರಪ್ಪ ಅವರ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ರ ಇಟ್ಟುಕೊಂಡಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ