ಪೆನ್‌ಡ್ರೈವ್ ಪ್ರಕರಣದ ಹಿಂದಿರುವ ಡಿಕೆಶಿಯನ್ನು ಸಂಪುಟದಿಂದ ಕೈಬಿಡುವಂತೆ ಸಿಎಂಗೆ ಕುಮಾರಸ್ವಾಮಿ ಆಗ್ರಹ

Sampriya

ಮಂಗಳವಾರ, 7 ಮೇ 2024 (18:48 IST)
ಬೆಂಗಳೂರು: ಹಾಸನದಲ್ಲಿ ವೈರಲ್ ಆಗಿರುವ ಅಶ್ಲೀಲ ವಿಡಿಯೋ ಹಿಂದೆ  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪಿತೂರಿ ಎದ್ದು ಕಾಣುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಡಿಕೆಶಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕುತಂತ್ರದಂತೆ ತನಿಖೆ ನಡೆಯುತ್ತಿದ್ದು,  ಪ್ರಕರಣ ಮುಚ್ಚಿಹಾಕಲು ಬಿಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಪ್ರಕರಣ ಹೇಗೆ ಪ್ರಾರಂಭವಾಗಿದೆ, ಅದು ಎಲ್ಲಿ ಬಂದು ನಿಂತಿದೆ ಎಂಬುದೆಲ್ಲ ಪಾರದರ್ಶಕವಾಗಿ ತನಿಖೆಯಾಗಬೇಕೆಂದರು.

ಇನ್ನೂ ಡಿಕೆ ಶಿವಕುಮಾರ್ ಅವರು ಇಂತಹ ಪ್ರಕರಣದಲ್ಲಿ ಎಕ್ಸ್‌ಪಾರ್ಟ್‌ ಇದ್ದಾರೆ. ಬೆಳಗಾವಿ ಸಾಹುಕಾರ್‌ ಅವರನ್ನು ಟ್ರ್ಯಾಪ್‌ ಮಾಡಿದ ಪ್ರಕರಣದಲ್ಲಿ ₹30 ಕೋಟಿಯಿಂದ ₹40 ಕೋಟಿ ವೆಚ್ಚ ಮಾಡಿದ್ದೇನೆ ಎಂದು ಶಿವಕುಮಾರ್ ಹೇಳುವ ಆಡಿಯೊ ಇದೆ. ಆದ್ದರಿಂದ ಶಿವಕುಮಾರ್ ಅವರನ್ನು ಸಂಪುಟದಿಂದ ತೆಗೆಯುವಂತೆ ಒತ್ತಾಯಿಸಿದರು.  

ಇನ್ನೂ ಪೆನ್‌ಡ್ರೈವ್‌ನಲ್ಲಿ ಮಹಿಳೆಯರ ಮಾನ ಮರ್ಯಾದೆಯನ್ನು ಬೀದಿ ಬೀದಿಗಳಲ್ಲಿ ಎಸೆದು, ರಾಜ್ಯದ ಮಾನ ಮರ್ಯಾದೆ ಹರಾಜು ಹಾಕುತ್ತಿರುವುದು ಶಿವಕುಮಾರ್‌ ಎಂದು ಆಕ್ರೋಶಗೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ