ನಿಗಮ ಮಂಡಳಿಗಳ ನೇಮಕ ಮಾಡದೇ ಫಾರಿನ್ ಟೂರ್ ಗೆ ತೆರಳಿದ ಕುಮಾರಸ್ವಾಮಿ

ಶನಿವಾರ, 29 ಡಿಸೆಂಬರ್ 2018 (12:40 IST)
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ನಡುವೆಯೇ ಶೀತಲ ಸಮರ ಏರ್ಪಟ್ಟಿದೆ. ಬಹುನಿರೀಕ್ಷಿತ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಸಹಿ ಹಾಕದೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೊಸ ವರ್ಷಾಚರಣೆಗಾಗಿ ಕುಟುಂಬ ಸಮೇತರಾಗಿ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ.



ಏಕಪಕ್ಷೀಯವಾಗಿ ಕಾಂಗ್ರೆಸ್ ನಿಗಮ ಮಂಡಳಿಗಳ ಪಟ್ಟಿಯನ್ನು ತಯಾರಿಸಿರುವ ಬಗ್ಗೆ ಜಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ಮರಳಿದ ಬಳಿಕವೇ ನಿಗಮ-ಮಂಡಳಿ ನೇಮಕಕ್ಕೆ ಅನುಮೋದನೆ ದೊರೆಯಲಿದೆ ಎನ್ನಲಾಗುತ್ತಿದೆ.

 
ನಿಗಮ ಮಂಡಳಿ ಸ್ಥಾನಕ್ಕೆ ಸಿಎಂ ತಮ್ಮ ಕುಟುಂಬ ಆಪ್ತರಾದ ಪ್ರೊ.ಕೆ.ಎಸ್.ರಂಗಪ್ಪ ನೇಮಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ನಿಗಮ ಮಂಡಳಿ ಅಧ್ಯಕ್ಷರ ವಯೋಮಿತಿ 65 ಮೀರುವಂತಿಲ್ಲ. ರಂಗಪ್ಪ ಅವರ ನೇಮಕಾತಿಗಾಗಿ ಮುಂದಿನ ವಾರವೇ ಸರ್ಕಾರ ಹೊಸ ಅಧಿಸೂಚನೆಯನ್ನು ಹೊರಡಿಸಲು ಮುಂದಾಗಲಿದೆಯಂತೆ. ವಯೋಮಿತಿಯನ್ನು 65ರ 70 ಕ್ಕೆ ಏರಿಸಲು ಸಿಎಂ ಪ್ಲಾನ್ ಮಾಡುವ ಮೂಲಕ ಕಾಂಗ್ರೆಸ್ ಶಾಕ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ