ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಜನವರಿ ಮತ್ತು ಫೆಬ್ರವರಿ ತಿಂಗಳ ಕಂತಿನ ಹಣವನ್ನು ಯಾವಾಗ ಹಾಕಲಾಗುತ್ತದೆ ಎಂಬ ಬಗ್ಗೆ ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಮಾಡುವ ಬಗ್ಗೆಅಂತೆಕಂತೆಗಳಿಗೆ ಅವರು ಇಂದು ತೆರೆ ಎಳೆದರು. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ಪರಿಷ್ಕರಣೆ ಮಾಡುವ ಯೋಜನೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
ಇದುವರೆಗೆ ಯಾವ ರೀತಿ ಗೃಹಲಕ್ಷ್ಮಿ ಹಣವನ್ನು ನೀಡಿಕೊಂಡು ಬರಲಾಗುತ್ತಿತ್ತೋ ಮುಂದಿನ ದಿನಗಳಲ್ಲೂ ಅದೇ ರೀತಿ ಮುಂದುವರಿಯಲಿದೆ ಎಂದಿದ್ದಾರೆ. ಸರ್ಕಾರ ಗೃಹಲಕ್ಷ್ಮಿ ಹಣಕ್ಕಾಗಿ 32 ಸಾವಿರ ಕೋಟಿ ಹಣವನ್ನು ನೀಡುತ್ತಿದೆ. ನಮ್ಮ ಇಲಾಖೆಯಲ್ಲಿ ಯಾವುದೇ ಅನುದಾನವನ್ನೂ ಉಳಿಸಿಕೊಂಡಿಲ್ಲ ಎಂದಿದ್ದಾರೆ.
ಇನ್ನು ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ಕ್ಲಿಯರ್ ಮಾಡುವ ಬಗ್ಗೆ ಮಾತನಾಡಿದ ಅವರು ಸರ್ಕಾರ ನವಂಬರ್ ಮತ್ತು ಡಿಸೆಂಬರ್ ತಿಂಗಳ ಹಣ ಕ್ಲಿಯರ್ ಆಗಿದೆ. ಜನವರಿ, ಫೆಬ್ರವರಿ ತಿಂಗಳ ಹಣ ಸದ್ಯದಲ್ಲೇ ಹಾಕಲಿದ್ದೇವೆ. ಹತ್ತು-ಹದಿನೈದು ದಿನ ವ್ಯತ್ಯಾಸವಾಗಬಹುದು. ಆದರೆ ತಡ ಮಾಡಲ್ಲ ಎಂದಿದ್ದಾರೆ.