ಪುತ್ರನ ಸೋಲಿನ ಶಾಕ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ನಾಟ್‌ರೀಚೆಬಲ್: ಬಿಜೆಪಿ ಲೇವಾಡಿ

Sampriya

ಬುಧವಾರ, 10 ಜುಲೈ 2024 (18:48 IST)
Photo Courtesy X
ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾದರೂ ಉಸ್ತುವರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ನಾಟ್‌ ರೀಚೆಬಲ್. ಪುತ್ರನ ಹೀನಾಯ ಸೋಲಿನ ಶಾಕ್‌ ನಿಂದ ಸಚಿವೆ ಇನ್ನೂ ಹೊರಬಂದಿಲ್ವ ಎಂದು ಬಿಜೆಪಿ ಲೇವಾಡಿ ಮಾಡಿದೆ.

ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಧಾರಾಕಾರ ಮಳೆಯಾಗಿದೆ. ಇದರಿಂದ ಕೆಲ ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಉಸ್ತುವಾರಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲೆಯತ್ತ ಸುಳಿದಿರಲಿಲ್ಲ. ಈ ಸಂಬಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಹೆಬ್ಬಾಳ್ಕರ್ ಅವರು ಮಗನ ಸೋಲಿನ ಶಾಕ್‌ನಿಂದ ಇನ್ನೂ ಹೊರಬಂದಿಲ್ವ. ಸಿಎಂ ಸಿದ್ದರಾಮಯ್ಯ ಅವರು ಉಸ್ತುವಾರಿ ಸಚಿವರಿಗೆ ಈ ಸಂಬಂಧ ಆದೇಶ ನೀಡಬೇಕೆಂದು ಹೇಳಿದೆ.

ಪುತ್ರನ ಹೀನಾಯ ಸೋಲಿನ ಶಾಕ್‌ ನಿಂದ ಇನ್ನೂ ಸಹ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
 ಅವರು ಹೊರಬಂದಿಲ್ಲ ಎಂದೆನಿಸುತ್ತದೆ.

ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿಯನ್ನು ಹಳ್ಳ ಹಿಡಿಸಿರುವ ಸಚಿವರು, ತಮ್ಮ ಉಸ್ತುವಾರಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ಪ್ರವಾಹ ಉಂಟಾದರೂ ಉಸ್ತುವಾರಿ ಸಚಿವರು ಮಾತ್ರ ನಾಟ್‌ ರೀಚೆಬಲ್!!

ಸಿಎಂ ಸಿದ್ದರಾಮಯ್ಯ ಅವರೆ, ಕೂಡಲೇ ಸಂಬಂಧಪಟ್ಟ ಉಸ್ತುವಾರಿ ಸಚಿವರು, ಪ್ರವಾಹ ನಿರತ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡುವಂತೆ ಆದೇಶ ನೀಡಿ, ಈ ಮೂಲಕ ಅಲ್ಪಸ್ವಲ್ಪವಾದರೂ ಜನೋಪಯೋಗಿ ಕೆಲಸ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ