ನಿರಂತರ ಮಳೆಯಿಂದ ಮಣ್ಣು ಕುಸಿತ

ಮಂಗಳವಾರ, 25 ಜುಲೈ 2023 (18:25 IST)
ಹಾಸನ ಜಿಲ್ಲೆ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ‌ ಮಣ್ಣು ಕುಸಿಯುತ್ತಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಸಕಲೇಶಪುರ ‌ತಾ. ಕೊಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರೋ ರಸ್ತೆಯಲ್ಲಿ ಮಣ್ಣು ಕುಸಿಯುತ್ತಿದೆ, ಹೊಸದಾಗಿ ಮಣ್ಣು ಹಾಕಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಕಾಮಗಾರಿ ನಡೆಯುತ್ತಿರುವಾಗಲೇ ಮಣ್ಣು ಕುಸಿಯುತ್ತಿದ್ದು, ಮಳೆ ಇನ್ನೂ ಹೆಚ್ಚಾದರೆ ಮಣ್ಣು ಕುಸಿದು ಕಾಂಕ್ರೀಟ್ ರಸ್ತೆಯೂ ಕುಸಿಯುವ ಸಾಧ್ಯತೆಯಿದೆ. ಪ್ರಯಾಣಿಕರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಹೀಗಾಗಿದೆ ಎಂದು ಸ್ಥಳೀಯರ ಆರೋಪ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ