ಹ್ಯಾಪೀ ಬರ್ತ್ ಡೇ ಸಚಿನ್: ಐಪಿಎಲ್ ನಲ್ಲಿ ತೆಂಡುಲ್ಕರ್ ಮಾಡಿದ ದಾಖಲೆ ಗೊತ್ತಾ?

ಶುಕ್ರವಾರ, 24 ಏಪ್ರಿಲ್ 2020 (10:02 IST)
ಮುಂಬೈ: ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಇಂದು 47 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಕಾರಣದಿಂದ ಸಚಿನ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.


ಆದರೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಕ್ರಿಕೆಟಿಗರು, ಸ್ನೇಹಿತರು ಕ್ರಿಕೆಟ್ ದಿಗ್ಗಜನಿಗೆ ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದಾರೆ.

ಟೆಸ್ಟ್, ಏಕದಿನ ಪಂದ್ಯಗಳಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನೇ ಮಾಡಿದ್ದ ಸಚಿನ್ ಐಪಿಎಲ್ ಆಡಿದ್ದು ಕಡಿಮೆ. ಅವರು ಮೊದಲ ಬಾರಿಗೆ ಐಪಿಎಲ್ ಆಡುವಾಗ 35 ವರ್ಷವಾಗಿತ್ತು. ಆದರೂ ಅಲ್ಲೂ ದಾಖಲೆ ವೀರ ತಮ್ಮ ಛಾಪು ಮೂಡಿಸಿದ್ದಾರೆ. ಅತೀ ವೇಗವಾಗಿ ಐಪಿಎಲ್ ನಲ್ಲಿ ಪಂದ್ಯ ಮತ್ತು ಇನಿಂಗ್ಸ್ ಗಳ ಆಧಾರದಲ್ಲಿ 1000, 2000 ರನ್ ಪೂರೈಸಿದ ದಾಖಲೆ ಸಚಿನ್ ರದ್ದು. ಇನ್ನು, ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ ಮನ್ ಗಳಿಗೆ ನೀಡುವ ಆರೆಂಜ್ ಕ್ಯಾಪ್ ಕೂಡಾ ಮೊದಲ ಬಾರಿಗೆ ಪಡೆದಿದ್ದು ಸಚಿನ್ ತೆಂಡುಲ್ಕರ್. ಇಂತಿಪ್ಪ ಕ್ರಿಕೆಟ್ ನ ಅನಭಿಷಕ್ತ ದೊರೆಗೆ ಹ್ಯಾಪೀ ಬರ್ತ್ ಡೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ