ಚಾರ್ಮಾಡಿಯಲ್ಲಿ ಅಂತೂ ಲಘು ವಾಹನ ಸಂಚಾರಕ್ಕೆ ಮುಕ್ತ
ಗುಡ್ಡ, ಮರ ಬಿದ್ದು ರಸ್ತೆ ಬ್ಲಾಕ್ ಆಗಿತ್ತು. ಇದರಿಂದಾಗಿ ವಾಹನ ಸಂಚಾರ ಬಂದ್ ಆಗಿತ್ತು. ಇದೀಗ ರಸ್ತೆಗೆ ಬಿದ್ದ ಮಣ್ಣು ಸರಿಸುವ ಕೆಲಸ ನಡೆದಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಿಡುವಿಲ್ಲದೇ ಎರಡು ದಿನ ಸುರಿದ ಮಳೆ ನಿನ್ನೆ ಕೊಂಚ ಬಿಡುವು ತೋರಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಈಗ ಲಘು ವಾಹನಕ್ಕೆ ಮಾತ್ರ ಸಂಚಾರ ಮಾಡಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಬಸ್ ಮುಂತಾದ ಘನ ವಾಹನಗಳು ಬಳಸು ದಾರಿ ಮೂಲಕವೇ ಮಂಗಳೂರು ಕಡೆಗೆ ಸಂಚಾರ ನಡೆಸುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.