ಲವ್ ಮಾಡಿ ಮದುವೆಯಾದ – ಆ ಮೇಲೆ ಪತ್ನಿಗೆ ಮಾಡಿದ್ದೇನು? ಶಾಕಿಂಗ್
ಬುಧವಾರ, 31 ಜುಲೈ 2019 (13:09 IST)
ಪ್ರೀತಿಸಿ ಮದುವೆಯಾದ ಭೂಪನೊಬ್ಬ ಮದುವೆಯಾದ ಮಾರನೆ ದಿನವೇ ಪತ್ನಿಗೆ ಮಾಡಬಾರದ ಕೆಲಸ ಮಾಡಿದ್ದಾನೆ.
ಅವರಿಬ್ಬರೂ ಕಳೆದ ಮೂರ್ನಾಲ್ಕು ತಿಂಗಳಿಂದ ಫೋನ್ ನಲ್ಲಿ ಲವ್ವಿ ಡವ್ವಿ ಶುರುಹಚ್ಚಿಕೊಂಡಿದ್ರು. ಕೊನೆಗೆ ಮದುವೆ ಆಗೋ ನಿರ್ಧಾರಕ್ಕೆ ಬಂದಿದ್ರು. ಇಬ್ರೂ ಸೇರಿ ಮದುವೆನೂ ಆಗಿಬಿಟ್ಟರು.
ಮದುವೆಯಾಗಿ ಮಾರನೇ ದಿನ ಎಲ್ರೂ ಹನಿಮೂನ್ ಮೂಡ್ ನಲ್ಲಿದ್ರೆ ಈ ಭೂಪ ಮಾತ್ರ ತನ್ನ ಪತ್ನಿಗೆ ಸಾವಿನ ಮನೆ ತೋರಿಸೋಕೆ ಯತ್ನಿಸಿದ್ದಾನೆ.
ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಕೆಳಕ್ಕೆ ದೂಡಿ ತಾನೂ ಹಾರಿದ್ದಾನೆ. ಆದರೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ದಿಸ್ಪುರದ ಫತೇಗಂಜ್ ಠಾಣೆ ವ್ಯಾಪ್ತಿಯ ರೈಲು ಹಳಿ ಮೇಲೆ ಬಿದ್ದಿದ್ದ ಪತ್ನಿ ಬೇಬಿ, ಪತಿ ಹೀರಾ ಅವರನ್ನು ಪೊಲೀಸರು ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಯಾವ ಕಾರಣಕ್ಕೆ ಮದುವೆಯಾದ ಮಾರನೇ ದಿನವೇ ಹೀರಾ ಹೀಗೆ ಮಾಡಿದ್ದಾನೆ ಎನ್ನೋದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.