ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ! ಹತ್ಯೆಗೈದ ಕಾರಣವಾದ್ರು ಏನು?

ಸೋಮವಾರ, 28 ಆಗಸ್ಟ್ 2023 (11:19 IST)
ಬೆಂಗಳೂರು : ಪ್ರಿಯತಮನೊಬ್ಬ ತನ್ನ ಪ್ರಿಯತಮೆಯನ್ನು ಕುಕ್ಕರ್ ನಿಂದ ಹೊಡೆದು ಕೊಲೆ ಮಾಡಿದ ಗಟನೆ ಸಿಲಿಕಾನ್ ಸಿಟಿಯ ಬೇಗೂರಿನಲ್ಲಿ ನಡೆದಿದೆ.

ಬೇಗೂರಿನ ನ್ಯೂ ಮೈಕೋ ಲೇಔಟ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ದೇವಾ (24) ಹತ್ಯೆಯಾದ ಯುವತಿಯಾಗಿದ್ದು, ವೈಷ್ಣವ್ (24) ಹತ್ಯೆ ಮಾಡಿದ ಆರೋಪಿ.

ಕೇರಳ ಮೂಲದವರಾಗಿರುವ ಈ ಜೋಡಿ ಕಳೆದ ಎರಡು ವರ್ಷಗಳಿಂದ ಲಿವಿಂಗ್ ಟುಗೇದರ್ ನಲ್ಲಿತ್ತು. ಇತ್ತೀಚೆಗೆ ಪ್ರಿಯತಮೆ ದೇವಾ ಬೇರೊಬ್ಬ ಯುವಕನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಲಾಗಿತ್ತು.

ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು. ಶನಿವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ವೈಷ್ಣವ್ ಅಲ್ಲೇ ಇದ್ದ ಕುಕ್ಕರ್ನಿಂದ ಯುವತಿಯ ತಲೆಗೆ ಹೊಡೆದಿದ್ದಾನೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ