ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಗ ಪ್ರಜ್ವಲ್ ರೇವಣ್ಣ ಜೊತೆ ಆರೋಪಿ ಸ್ಥಾನದಲ್ಲಿರುವ ಎಚ್ ಡಿ ರೇವಣ್ಣ ಬಗ್ಗೆ ಎಲ್.ಆರ್. ಶಿವರಾಮೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಗನ ಜೊತೆಗೆ ಎಚ್ ಡಿ ರೇವಣ್ಣ ವಿರುದ್ಧ ಮನೆಕೆಲಸದಾಕೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಳೆ. ಎಚ್ ಡಿ ರೇವಣ್ಣ ಮಸಾಜ್ ಮಾಡಿಸುವ ನೆಪದಲ್ಲಿ ಮೈ,ಕೈ ಮುಟ್ಟಲು ಬರುತ್ತಿದ್ದರು ಎಂದು ಮನೆಕೆಲಸದಾಕೆ ದೂರಿದ್ದಳು. ಇದೀಗ ರೇವಣ್ಣ ಬಗ್ಗೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮಹತ್ವದ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಆರ್. ಶಿವರಾಮೇಗೌಡ ಮಗ ಇಂತಹ ಕೃತ್ಯ ನಡೆಸುವಾಗ ಅವರ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ದರಾ? ಅಷ್ಟಕ್ಕೂ ರೇವಣ್ಣನೇ ಒಳ್ಳೆಯ ನಡತೆಯಿರುವ ವ್ಯಕ್ತಿಯಲ್ಲ. ಹಿಂದೊಮ್ಮೆ ಇಂಗ್ಲೆಂಡ್ ಗೆ ಹೋಗಿದ್ದಾಗ ಇಂತಹದ್ದೇ ಕಾರಣಕ್ಕೆ ಸಿಕ್ಕಿಹಾಕಿಕೊಂಡಿದ್ದರು ಎಂದು ಶಿವರಾಮೇಗೌಡ ಹೇಳಿದ್ದಾರೆ.
ಇದೀಗ ಎಚ್ ಡಿ ರೇವಣ್ಣ ಮೇಲೆ ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ಮತ್ತು ತಮ್ಮ ಸಹಾಯಕನ ಮೂಲಕ ಮಹಿಳೆಯನ್ನು ಅಪಹರಿಸಿದ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು ಇಂದು ತೀರ್ಪು ಹೊರಬರಲಿದೆ.