ಮಹಾದಾಯಿ: ಹೋರಾಟಗಾರರಲ್ಲಿ ಭಿನ್ನಮತ ಸ್ಫೋಟ

ಬುಧವಾರ, 18 ಜುಲೈ 2018 (14:05 IST)
ಮಹದಾಯಿ ಹೋರಾಟಗಾರರು ದಯಾಮರಣ ಕೋರಿ ಅರ್ಜಿಯನ್ನು ರಾಷ್ಟ್ರಪತಿಗೆ ಬರೆದ ಹಿನ್ನಲೆಯಲ್ಲಿ ಮಹದಾಯಿ ಹೋರಾಟಗಾರರಲ್ಲಿಯೇ ಭಿನ್ನಮತ ಸ್ಫೋಟಗೊಂಡಿದೆ. ಮಹದಾಯಿಗಾಗಿ ಮಹಾ ವೇದಿಕೆ ಪದಾಧಿಕಾರಿಗಳು ಇದೀಗ ರೈತ ಹೋರಾಟಗಾರ ಸೊಬರದಮಠ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ.

ಗದಗ ನಗರದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ,  ದಯಾಮರಣ ಕೇಳಿದ್ದಕ್ಕೆ ಮಹದಾಯಿ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರುದಯಾಮರಣ ಕೇಳೋದು ಹೇಡಿಗಳ ಕೆಲಸ, ದುರ್ಬಲ ಮನಸ್ಸಿನ ರೈತರಿಗೆ ದಯಾಮರಣ ಪ್ರಚೋದನೆ ನೀಡಿದಂತಾಗುತ್ತೆ. ಅಲ್ಲದೆ ರೈತರು ದಯಾಮರಣ ಕೇಳುವಷ್ಟು ದುರ್ಬಲವಾಗಿಲ್ಲ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ದಯಾಮರಣ ಮೂಲಕ ಸೊಬರದಮಠರೈತರಿಗೆ ಸಾಯಲು ಪ್ರಚೋದನೆ ನೀಡುತ್ತಿದ್ದಾರೆ. ನೀರಿಗಾಗಿ ಸಾಯುವ ರೈತರು ನಾವಲ್ಲ ಆಗಷ್ಟ 8 ರಂದು ನ್ಯಾಯಾಧೀಕರಣದಲ್ಲಿ ನಮ್ಮ ಪರ ತೀರ್ಪು ಬರಲಿದೆ. ಒಂದು ವೇಳೆ ನಮ್ಮ ಪರ ತೀರ್ಪು ಬರದಿದ್ದರೆ ಮತ್ತೆ ನರಗುಂದ ಬಂಡಾಯ ಆಗೋದಂತು  ಸತ್ಯ ಎಂದು ಎಚ್ಚರಿಸಿದರು.

ಇನ್ನು ನಾವು ಬಂಡಾಯ ನೆಲದ ಗಂಡೆದೆ ಗಂಡಸರು. ನಾವು ಹೇಡಿಗಳಂತೆ ಮಾತಾಡಲ್ಲ ಎಂದು ಮಹಾದಾಯಿಗಾಗಿ ಮಹಾವೇದಿಕೆ ಮುಖ್ಯ ಸಂಚಾಲಕ ಶಂಕ್ರಪ್ಪ ಅಂಬಲಿ, ಬೆಳಗಾವಿ ಜಿಲ್ಲಾ ಸಂಚಾಲಕ ಶಂಕರಗೌಡ ಪಾಟೀಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ