ಬೆಂಗಳೂರು: ಇಂದು ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಬಾಳೆಹಣ್ಣು ಸೇರಿದಂತೆ ಎಲ್ಲಾ ಹಣ್ಣು, ಹೂಗಳ ಬೆಲೆ ಗಗನಕ್ಕೇರಿದೆ.
ಶಿವರಾತ್ರಿ ಸಂದರ್ಭದಲ್ಲಿ ದೇವರ ಪೂಜೆಗಾಗಿ ಹಣ್ಣು, ಹೂಗಳಿಗೆ ಭಾರೀ ಬೇಡಿಕೆಯಿದೆ. ಅದದರಲ್ಲೂ ಬಾಳೆಹಣ್ಣು ದೇವರ ನೈವೇದ್ಯಕ್ಕೆ ಬಳಕೆಯಾಗುತ್ತದೆ. ಈ ಕಾರಣಕ್ಕೆ ಬಾಳೆಹಣ್ಣಿನ ಬೆಲೆ ವಿಪರೀತ ಎನಿಸುವಷ್ಟು ದುಬಾರಿಯಾಗಿದೆ.
ಮೊನ್ನೆ ಮೊನ್ನೆಯಷ್ಟೇ ಕೆ.ಜಿ.ಗೆ 50 ರಿಂದ 60 ರೂ.ಗಳಷ್ಟಿದ್ದ ಏಲಕ್ಕಿ ಬಾಳೆಹಣ್ಣಿನ ಬೆಲೆ ಇಂದು 100 ರ ಗಡಿ ದಾಟಿದೆ. ಇತರೆ ಹಣ್ಣುಗಳ ಬೆಲೆಯೂ 100 ರ ಆಸುಪಾಸಿನಲ್ಲಿದೆ. ಮಾವಿನ ಹಣ್ಣೂ ಮಾರುಕಟ್ಟೆಗೆ ಬರಲಾರಂಭಿಸಿದ್ದು 200 ರೂ.ಗಳಷ್ಟು ಬೆಲೆಯಿದೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜನರು ಮಾರುಕಟ್ಟೆಗೆ ತೆರಳಿ ಹೂ-ಹಣ್ಣುಗಳನ್ನು ಖರೀದಿಸುವ ಭರಾಟೆ ಜೋರಾಗಿದೆ. ಆದರೆ ಹೂ-ಹಣ್ಣುಗಳ ಬೆಲೆ ಜೇಬಿಗೆ ಭಾರವಾಗುತ್ತಿದೆ. ಆದರೆ ಖರೀದಿಸದಂತೆಯೂ ಇಲ್ಲ ಎಂಬ ಸ್ಥಿತಿ ಗ್ರಾಹಕರದ್ದಾಗಿದೆ.