ಮಕರ ಸಂಕ್ರಾಂತಿ ಹಬ್ಬ; ಹುಲಗನ ಮುರುಡಿಯಲ್ಲಿ ಭಕ್ತಸಾಗರ

ಮಂಗಳವಾರ, 15 ಜನವರಿ 2019 (18:21 IST)
ಮಕರ ಸಂಕ್ರಮಣ ಅಂಗವಾಗಿ ಹುಲಗನ ಮುರುಡಿಗೆ ಅಪಾರ ಭಕ್ತ ಸಾಗರ ಹರಿದು ಬಂದಿತು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಲುಗನ ಮುರುಡಿ ವೆಂಕಟರಮಣ ಸ್ವಾಮಿ ಬೆಟ್ಟಕ್ಕೆ ಜನ ಸಾಗರವೇ ಹರಿದುಬಂದಿತು.

ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮದ ಜೊತೆಗೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.

ತಾಲೂಕಿನಲ್ಲಿ ಎಲ್ಲೆಲ್ಲೂ ಹಬ್ಬದ ವಾತಾವರಣ ವಿಜೃಂಭಣೆಯಾಗಿ ಕಂಡು ಬಂದಿತು. ಸುತ್ತಲಿನ ಗ್ರಾಮಸ್ಥರು ಹಬ್ಬದ ಪ್ರಯುಕ್ತ ಹುಲುಗನ ಮುರುಡಿ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು.

ತನ್ನದೇ ಆದ ಇತಿಹಾಸವನ್ನು ಹೊಂದಿರುವ ಹುಲುಗನ ಮುರುಡಿಗೆ ಪ್ರತಿ ವರ್ಷವೂ ಸಾಗರೋಪಾದಿಯಲ್ಲಿ ಭಕ್ತ ಸಾಗರ  ಹರಿದು ಬರುತ್ತದೆ.

ಹಬ್ಬದ ಪ್ರಯುಕ್ತ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಬರುವುದರಿಂದ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕಳೆದ ವರ್ಷಕ್ಕಿಂತ ಈ ಬಾರಿ ಭಕ್ತಾದಿಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಗುಂಡ್ಲುಪೇಟೆ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಬಾಲಕೃಷ್ಣ  ಹಾಗೂ ಲತೇಶ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ