ಮೋದಿಯ ಮೇಕ್ ಇನ್ ಇಂಡಿಯಾ ಕೇವಲ ಘೋಷಣೆ: ಸಚಿವ ಜಯಚಂದ್ರ

ಬುಧವಾರ, 31 ಆಗಸ್ಟ್ 2016 (13:53 IST)
ಮೋದಿಯ ಮೇಕ್ ಇನ್ ಇಂಡಿಯಾ ಯೋಜನೆ ಕೇವಲ ಘೋಷಣೆ. ನಿಜವಾಗಿ ಯೋಜನೆಗಳನ್ನು ರೂಪಿಸುವುದು ನಾವು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ.ಜಯಚಂದ್ರ ಲೇವಡಿ ಮಾಡಿದ್ದಾರೆ.
 
ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯ ಬಳಿಕ ಮಾತನಾಡಿದ ಕಾನೂನು ಖಾತೆ ಸಟಿವ ಟಿ.ಬಿ.ಜಯಚಂದ್ರ, ರಾಜ್ಯ ಸರಕಾರದ ಎದುರು 1490 ಕೋಟಿ ರೂ ಬಂಡವಾಳ ಹೂಡಿಕೆಯ 33 ಪ್ರಸ್ತಾವನೆಗಳು ಬಂದಿವೆ ಎಂದರು.
 
ಸಚಿವ ಸಂಪುಟ ಸಭೆಯಲ್ಲಿ ಸಿಎಂ ಕಚೇರಿ ವಿಶೇಷ ಅಧಿಕಾರಿಯಾಗಿ ನಿವೃತ್ತ ನ್ಯಾಯಮೂರ್ತಿ ವಿ.ವಿ.ಚಂದ್ರಶೇಖರ್ ನೇಮಕಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ ಎಂದು ತಿಳಿಸಿದ್ದಾರೆ.  
 
ವೈಮಾನಿಕ ಕ್ಷೇತ್ರದಲ್ಲಿ ಎಂದಿನಂತೆ ಪ್ರಾಬಲ್ಯ ಹೊಂದಲು ಹೊಸ ವೈಮಾನಿಕ ನೀತಿ ಜಾರಿಗೆ ತರಲು ಸಂಪುಟ ಸಭೆ ಸಮ್ಮಿತ ಸೂಚಿಸಿದೆ ಎಂದರು. 
 
ರಾಜ್ಯದಲ್ಲಿ 7 ಪ್ಯಾರಾ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒಪ್ಪಿಗೆ ದೊರೆತಿದ್ದಲ್ಲದೇ ಹಗರು ರೈಲು ಯೋಜನೆ ಜಾರಿಗೆ ಸರಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಸಂಪನ್ಮೂಲ ಕ್ರೂಢಿಕರಿಸಲು ಸೂಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಟಿ.ಬಿ,ಜಯಚಂದ್ರ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ