Malappuram Elephant: ಜಾತ್ರೆಯಲ್ಲಿ ರೊಚ್ಚಿಗೆದ್ದ ಆನೆ ಮನುಷ್ಯರನ್ನೇ ಎತ್ತಿ ಬಿಸಾಕಿತು: ಭಯಾನಕ ವಿಡಿಯೋ ಇಲ್ಲಿದೆ

Krishnaveni K

ಬುಧವಾರ, 8 ಜನವರಿ 2025 (14:07 IST)
ಬೆಂಗಳೂರು: ಜಾತ್ರೆಯಲ್ಲಿ ರೊಚ್ಚಿಗೆದ್ದ ಆನೆ ಮನುಷ್ಯರನ್ನೇ ಎತ್ತಿ ಬಿಸಾಕಿ ದಾಂಧಲೆ ನಡೆಸಿದ ದೃಶ್ಯವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೇರಳದ ಮಲಪ್ಪುರಂನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಲಪ್ಪುರ ಜಿಲ್ಲೆಯ ತಿರೂರಿನಲ್ಲಿ ದೇವಾಲಯ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಜಾತ್ರೆ ವೇಳೆ ಆನೆಗೆ ಆಭರಣ ತೊಡಿಸಿ ಬೇರೆ ಆನೆಗಳ ಜೊತೆ ನಿಲ್ಲಿಸಲಾಗಿತ್ತು. ಈ ವೇಳೆ ವಾದ್ಯ, ಗಂಟೆ, ಘೋಷಗಳು ಜೋರಾಗಿ ಮೊಳಗುತ್ತಿದ್ದವು.

ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಇದರಿಂದ ಆನೆ ರೊಚ್ಚಿಗೆದ್ದಿತ್ತು. ಇದ್ದಕ್ಕಿದ್ದಂತೆ ಜನರತ್ತ ನುಗ್ಗಿದ ಆನೆ ಮೊದಲು ಜನರತ್ತ ನುಗ್ಗಿತ್ತು. ಬಳಿಕ ಒಬ್ಬಾತನನ್ನು ಎತ್ತಿ ಎಸೆದಿದೆ. ರಾತ್ರಿ ಈ ಘಟನೆ ನಡೆದಿದೆ.

ನಸುಕಿನ ಜಾವ 2.30 ರ ವೇಳೆ ಹೇಗೋ ಮಾವುತ ಆನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾನೆ. ಈ ಘಟನೆಯಲ್ಲಿ ಸುಮಾರು 29 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Kerala, Malappuram: A sudden elephant attack during a temple festival leaves 17 injured. One person's condition is critical.#ElephantRampage #ViralVideos #Viral #Kerala pic.twitter.com/VhPQdTfW5a

— TIMES NOW (@TimesNow) January 8, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ