ಕುಂಭಮೇಳದಲ್ಲಿ ನೂರಲ್ಲ, ಇನ್ನೂರಲ್ಲ ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ

Krishnaveni K

ಸೋಮವಾರ, 3 ಫೆಬ್ರವರಿ 2025 (17:44 IST)
Photo Credit: X
ನವದೆಹಲಿ: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ನೂರು, ಇನ್ನೂರು ಅಲ್ಲ ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರಂತೆ. ಹೀಗಂತ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ರಾಜ್ಯಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ಮೌನಿ ಅಮವಾಸ್ಯೆ ದಿನ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ 30 ಭಕ್ತರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ವರದಿ ನೀಡಿತ್ತು. ಘಟನೆಯಲ್ಲಿ ಕರ್ನಾಟಕದ ನಾಲ್ವರೂ ಸಾವನ್ನಪ್ಪಿದ್ದರು. ಆದರೆ ಉತ್ತರ ಪ್ರದೇಶ ಸರ್ಕಾರ ಸಾವಿನ ನಿಖರ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎನ್ನುವುದು ಖರ್ಗೆ ಆರೋಪವಾಗಿದೆ.

ಕುಂಭಮೇಳದಲ್ಲಿ 1000 ಜನ ಸಾವನ್ನಪ್ಪಿದ್ದಾರೆ ಎಂದು ನಾನು ಹೇಳುತ್ತೇನೆ. ಒಂದು ವೇಳೆ ನಾನು ಹೇಳಿದ್ದು ತಪ್ಪು ಎಂದಾದರೆ ಸರ್ಕಾರ ನಿಖರ ಅಂಕಿ ಅಂಶ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಾಗ ಕುಂಭಮೇಳದಲ್ಲಿ ಸಾವನ್ನಪ್ಪಿದ್ದ ಸಾವಿರಾರು ಮಂದಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿ ಹೇಳಿದ್ದಾರೆ. ಆಗ ಸ್ಪೀಕರ್ ಜಗದೀಪ್ ಧನ್ಕರ್ ನಿಮ್ಮ ಮಾತು ಹಿಂದೆ ತೆಗೆದುಕೊಳ್ಳಿ ಎಂದಿದ್ದಾರೆ. ಆಗ ಅವರು ನಾನು ಹೇಳಿದ್ದು ತಪ್ಪಾದರೆ ಸಾವಿನ ನಿಖರ ಸಂಖ್ಯೆ ಬಿಡುಗಡೆ ಮಾಡಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ