ಗಂಗಾನದಿಯಲ್ಲಿ ಸ್ನಾನ ಮಾಡಿದ್ರೆ ತಮಾಷೆ, ಹಜ್ ಯಾತ್ರೆ ಪವಿತ್ರಾನಾ: ಬಜೆಟ್ ಬಗ್ಗೆ ಖರ್ಗೆ ಕಾಮೆಂಟ್ ಟ್ರೋಲ್

Krishnaveni K

ಭಾನುವಾರ, 2 ಫೆಬ್ರವರಿ 2025 (09:50 IST)
ನವದೆಹಲಿ: ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಟೀಕಿಸುವಾಗ ಹಜ್ ಯಾತ್ರೆಗೆ ಹೋಲಿಸಿದ್ದಕ್ಕೆ ಮತ್ತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ನಿರ್ಮಲಾ ಸೀತಾರಾಮನ್ ಬಜೆಟ್ ಟೀಕಿಸುವಾಗ ಖರ್ಗೆ, ‘900 ಇಲಿಗಳನ್ನು ತಿಂದ ಬೆಕ್ಕು ಹಜ್ ಯಾತ್ರೆಗೆ ಹೋಯ್ತು’ ಎಂದು ಟೀಕಿಸಿದ್ದರು. ಅಂದರೆ ತಿಂದ ಪಾಪ ಕಳೆದು ಪುಣ್ಯ ಗಳಿಸಲು ಹಜ್ ಯಾತ್ರೆಗೆ ಹೋಯಿತು ಎನ್ನುವುದು ಇದರ ಅರ್ಥವಾಗಿದೆ. ಆ ಮೂಲಕ ಅವರು ಹಜ್ ಯಾತ್ರೆಯನ್ನು ಪವಿತ್ರ ಎಂದಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ಮೊನ್ನೆಯಷ್ಟೇ ಕುಂಭಮೇಳದ ಬಗ್ಗೆ ಖರ್ಗೆ ವ್ಯಂಗ್ಯ ಮಾಡಿದ್ದರು. ಗಂಗಾನದಿಯಲ್ಲಿ ಸ್ನಾನ ಮಾಡಿದ್ರೆ, ಕುಂಭಮೇಳಕ್ಕೆ ಹೋದರೆ ಪಾಪ ಕಳೆಯಲ್ಲ ಎಂದು ಲೇವಡಿ ಮಾಡಿದ್ದರು. ಇದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹಿಂದೂಗಳ ನಂಬಿಕೆಯನ್ನು ಪ್ರಶ್ನೆ ಮಾಡಲು ನಿಮಗೆಷ್ಟು ಧೈರ್ಯ ಎಂದು ಹಲವರು ಕಿಡಿ ಕಾರಿದ್ದರು.

ಇದೀಗ ಬಜೆಟ್ ವಿಚಾರದಲ್ಲಿ ಹಜ್ ಯಾತ್ರೆಯನ್ನು ಪವಿತ್ರ ಯಾತ್ರೆ ಎಂದು ಪರೋಕ್ಷವಾಗಿ ಹೇಳಿರುವುದಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಅಂದರೆ ನಿಮಗೆ ಹಿಂದೂಗಳ ಕುಂಭಮೇಳ ತಮಾಷೆಯ ವಿಷಯ. ಹಜ್ ಯಾತ್ರೆಗೆ ಹೋದರೆ ಪುಣ್ಯ ಬರುತ್ತದೆ ಎಂದು ಪರೋಕ್ಷವಾಗಿ ಹೇಳುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ಮತ್ತೆ ಕೆಲವರು ಸಾವಿರಾರು ಕೋಟಿ ರೂ. ಲೂಟಿ ಮಾಡಿದ ಕರಿಬೆಕ್ಕು ಪ್ರೇಯರ್ ಮಾಡಲು ಹೊರಟಿತ್ತು ಎಂದು ಖರ್ಗೆಯನ್ನೇ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ