ಯುವತಿಯ ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್ ಮೇಲ್
ವೈವಾಹಿಕ ಅಂಕಣದಲ್ಲಿ ಯುವತಿ ತನ್ನ ಹೆಸರು, ಮೊಬೈಲ್ ಸಂಖ್ಯೆ ನೊಂದಾಯಿಸಿಕೊಂಡಿದ್ದಳು. ಇದನ್ನು ಗಮನಿಸಿ ಆಕೆಯ ಜತೆ ಆರೋಪಿ ಸ್ನೇಹ ಬೆಳೆಸಿಕೊಂಡಿದ್ದ. ಅಲ್ಲದೆ, ಮದುವೆಯಾಗುವುದಾಗಿಯೂ ನಂಬಿಸಿದ್ದ.
ಆ ಬಳಿಕ ಆಕೆಯ ಖಾಸಗಿ ಫೋಟೋ ಸೆರೆಹಿಡಿದು ಹಣಕ್ಕಾಗಿ ಬೇಡಿಕೆಯಿಟ್ಟಿದ್ದ. ಆಕೆ ಒಪ್ಪದೇ ಇದ್ದಾಗ ಸಾಮಾಜಿಕ ಜಾಲತಾನದಲ್ಲಿ ಅಪ್ ಲೋಡ್ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ 50 ಸಾವಿರ ರೂ. ನೀಡಿ ಡಿಲೀಟ್ ಮಾಡುವಂತೆ ಕೇಳಿದ್ದಾಳೆ. ಆದರೂ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟಾಗ ಯುವತಿ ಬೇರೆ ದಾರಿ ಕಾಣದೇ ಪೊಲೀಸರಿಗೆ ದೂರು ನೀಡಿದ್ದಾಳೆ.