Mangaluru Suhas Shetty murder: ಹಿಂದೂಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದು ಕೇಳಿದ್ದಕ್ಕೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು

Krishnaveni K

ಶುಕ್ರವಾರ, 2 ಮೇ 2025 (15:48 IST)
ಬೆಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ ರಾಜ್ಯ ಸರ್ಕಾರದಿಂದ ರಕ್ಷಣೆ ಸಿಗಲ್ವಾ ಎಂಬ ಪ್ರಶ್ನೆಗೆ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ನಡು ರಸ್ತೆಯಲ್ಲೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಬಳಿಕ ಮಂಗಳೂರಿನಲ್ಲಿ ಈಗ ಪ್ರಕ್ಷುಬದ್ಧ ವಾತಾವರಣವಿದ್ದು ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಘಟನೆ ಬಗ್ಗೆ ಇಂದು ಸ್ಪೀಕರ್ ಯುಟಿ ಖಾದರ್ ಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಾವು ಅಧಿಕಾರಕ್ಕೆ ಬಂದರೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದಿದ್ದಿರಿ. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲೂ ಇಂತಹ ಘಟನೆ ನಡೆಯುತ್ತಿದೆಯಲ್ಲಾ ಸಾರ್ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ.

ಇದಕ್ಕೆ ಉತ್ತರಿಸಿರುವ ಸ್ಪೀಕರ್ ಖಾದರ್ ‘ನೋಡಿ ನಾನೀಗ ಸ್ಪೀಕರ್ ಸ್ಥಾನದಲ್ಲಿರುವವನು. ರಾಜ್ಯ ಸರ್ಕಾರದ ಸಂಬಂಧಿತ ಸಚಿವರು ಅದನ್ನೆಲ್ಲವನ್ನೂ ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು ಎಂದೇ ನಾನು ಬಯಸುವವನು. ನಮ್ಮ ನಗರ ಪ್ರಾಕೃತಿಕವಾಗಿ ಸುಂದರ ನಗರ. ಅದನ್ನು ಕಾಪಾಡಿಕೊಳ್ಳಬೇಕು. ಇಂತಹ ಗಲಭೆಗಳು ಆಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ